’ಅಪನಿ ಬಾತ್‌ ರಾಹುಲ್‌ ಕೆ ಸಾತ್‌ ’; ಯುವಕರೊಂದಿಗೆ ರಾಹುಲ್‌ ಗಾಂಧಿ ಊಟ, ಸಂವಾದ

7

’ಅಪನಿ ಬಾತ್‌ ರಾಹುಲ್‌ ಕೆ ಸಾತ್‌ ’; ಯುವಕರೊಂದಿಗೆ ರಾಹುಲ್‌ ಗಾಂಧಿ ಊಟ, ಸಂವಾದ

Published:
Updated:

ನವದೆಹಲಿ: ‘ನಾನು ರಾಹುಲ್‌, ನಾನು ಕಾಂಗ್ರೆಸ್‌ ಅಧ್ಯಕ್ಷ’. ಮೊದಲ ಭಾಗದ ‘ಅಪನಿ ಬಾತ್‌ ರಾಹುಲ್‌ ಕೆ ಸಾತ್‌’ಗೆ ಸ್ವಾಗತ– ‍

ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕಿ ಬಾತ್‌’ ಕಾರ್ಯಕ್ರಮಕ್ಕೆ ಉತ್ತರವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಹೊಸ ಕಾರ್ಯಕ್ರಮ ಪ್ರಾರಂಭಿಸಿದ್ದಾರೆ. 

ನವದೆಹಲಿಯಲ್ಲಿ ರಾತ್ರಿ ಊಟದ ಸಮಯದಲ್ಲಿ ರಾಷ್ಟ್ರ ವಿವಿಧ ಭಾಗಗಳ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರೊಂದಿಗೆ ಊಟದ ಜತೆಯಲ್ಲಿ ಚರ್ಚಿಸುವ ಕಾರ್ಯಕ್ರಮದ ವಿಡಿಯೊ ಕಾಂಗ್ರೆಸ್‌ ಫೇಸ್‌ಬುಕ್‌ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ‘ರಾಹುಲ್‌ ಜತೆಗೆ ರಾತ್ರಿ ಊಟ..’ ಎನ್ನಬಹುದಾದ ಈ ಸಂವಾದದಲ್ಲಿ ರಾಹುಲ್‌ ತನ್ನ ಕಪ್ಪು ಜಾಕೆಟ್‌ ಧರಿಸಿ ಬರುವುದನ್ನು ಮರೆತಿರಲಿಲ್ಲ. ತನ್ನನ್ನು ಪರಿಚಯ ಮಾಡಿಕೊಂಡ 48 ವರ್ಷ ವಯಸ್ಸಿನ ರಾಜಕೀಯ ಮುಖಂಡ, ’ಯುವಕರೊಂದಿಗೆ ಮಾತುಕತೆ ನಡೆಸುವ ಮೂಲಕ, ಅವರ ಯೋಚನೆಗಳನ್ನು ತಿಳಿಯುವ ಪ್ರಯತ್ನ’ ಎಂದಿದ್ದಾರೆ. 

ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ, ದಲಿತ ವಿಚಾರ, ಲೈಂಗಿಕ ಅಲ್ಪಸಂಖ್ಯಾತರ ಕುರಿತ ನಿಯಮಗಳು,..ಹೀಗೆ ಯುವಕ–ಯುವತಿಯರು ಕೇಳಿರುವ ಹತ್ತು ಹಲವು ಪ್ರಶ್ನೆಗಳು ಹಾಗೂ ಉತ್ತರಗಳ ತುಣುಕನ್ನು ಇಲ್ಲಿ ಕಾಣಬಹುದು. 

‘ನಾವು ಪ್ರಣಾಳಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಅದರ ಬಗ್ಗೆ ಮುಕ್ತ ಚರ್ಚೆಗೆ ಅವಕಾಶವಿದೆ...ಇಲ್ಲಿನ ಚರ್ಚೆಗಳಲ್ಲಿ ಕೆಲವನ್ನು ನಾನು ಅದರಲ್ಲಿ ಸೇರಿಸಲು ಪ್ರಯತ್ನಿಸುತ್ತೇನೆ’ ಎಂದು ರಾಹುಲ್‌ ಹೇಳಿದರು. ಜನರು ಮತ್ತು ಅಧಿಕಾರದ ನಡುವಿನ ಅಂತರವನ್ನು ಅಂತ್ಯಗೊಳಿಸಲು ಕ್ರಮಕ್ಕೆ ಮುಂದಾಗಿರುವುದಾಗಿ ಕಾಂಗ್ರೆಸ್‌ ಪ್ರಕಟಿಸಿಕೊಂಡಿದೆ. 

ಮಂಗಳವಾರ ಮಧ್ಯಾಹ್ನ ಈ  ವಿಡಿಯೊ ಪ್ರಕಟಿಸಲಾಗಿದ್ದು, ಈವರೆಗೂ 23 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪ್ರಧಾನಿ ಮೋದಿ ಅವರ ಮನ್‌ ಕಿ ಬಾತ್‌ ಏಕಮುಖವಾದುದು, ಪ್ರಧಾನಿ ಜನರ ಮಾತುಗಳನ್ನು ಕೇಳಲು ನಿರಾಕರಿಸುತ್ತಾರೆ ಎಂದು ರಾಹುಲ್‌ ಆಗಾಗ್ಗೆ ಟೀಕಿಸುತ್ತಿರುತ್ತಾರೆ. ರಾಹುಲ್ ಗಾಂಧಿ 2014ರ ಚುನಾವಣೆಗೂ ಮುನ್ನ ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಇಂಥದ್ದೇ ಸಂವಾದವನ್ನು ನಡೆಸಿದ್ದರು. 

ಬರಹ ಇಷ್ಟವಾಯಿತೆ?

 • 24

  Happy
 • 4

  Amused
 • 2

  Sad
 • 5

  Frustrated
 • 19

  Angry

Comments:

0 comments

Write the first review for this !