‘ಆ್ಯಪಲ್‌’ ಉದ್ಯೋಗಿ ಹತ್ಯೆ ಪ್ರಕರಣಕ್ಕೆ ಜಾತಿ ಬಣ್ಣ

7
ಯೋಗಿ ವಿರುದ್ಧ ಬಿಜೆಪಿಯ ಬ್ರಾಹ್ಮಣ ನಾಯಕರ ಅಸಮಾಧಾನ

‘ಆ್ಯಪಲ್‌’ ಉದ್ಯೋಗಿ ಹತ್ಯೆ ಪ್ರಕರಣಕ್ಕೆ ಜಾತಿ ಬಣ್ಣ

Published:
Updated:
Deccan Herald

ಲಖನೌ: ಆ್ಯಪಲ್‌ ಕಂಪನಿಯ ಉದ್ಯೋಗಿ ವಿವೇಕ್‌ ತಿವಾರಿಯನ್ನು ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಜಾತಿ ಬಣ್ಣ ನೀಡಲಾಗುತ್ತಿದ್ದು, ಬಿಜೆಪಿಯ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ನಾಯಕರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹುಜನ ಸಮಾಜ ಪಾರ್ಟಿಯ (ಬಿಎಸ್‌ಪಿ) ಮುಖ್ಯಸ್ಥೆ ಮಯಾವತಿ ಸಹ ಬಿಜೆಪಿ ನಾಯಕರ ಹೇಳಿಕೆಗೆ ದನಿಗೂಡಿಸಿದ್ದಾರೆ. ಉತ್ತರ ಪ್ರದೇಶದ ಪ್ರಸ್ತುತ ಆಡಳಿತದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಆಪಾದಿಸಿದ್ದಾರೆ. 

ಆಡಳಿತ ಪಕ್ಷದ ನಾಯಕರಿಂದಲೇ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಮುಜುಗರಕ್ಕೆ ಒಳಗಾಗಿದೆ. ಒಬ್ಬ ಸಚಿವರ ಹಾಗೂ ಇಬ್ಬರು ಶಾಸಕರು ಸರ್ಕಾರವನ್ನು ಟೀಕಿಸಿ, ರಾಜ್ಯದಲ್ಲಿ ಸಂವೇದನಾಶೀಲತೆಯೇ ಇಲ್ಲದ ಆಡಳಿತವಿದೆ ಎಂಬುದನ್ನು ಈ ಘಟನೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

‘ಪೊಲೀಸ್‌ ಇಲಾಖೆಯಲ್ಲಿ ಅಪರಾಧ ಮನೋಭಾವ ಹೊಂದಿದವರಿದ್ದಾರೆ ಎಂಬುದನ್ನು ಈ ಘಟನೆ ತೋರ್ಪಡಿಸುತ್ತದೆ. ಇದು ಸರ್ಕಾರಕ್ಕೆ ಕಪ್ಪುಚುಕ್ಕೆ’ ಎಂದು ಬಿಜೆಪಿ ಮುಖಂಡ ಕಲ್‌ರಾಜ್‌ ಮಿಶ್ರಾ ಹೇಳಿದ್ದಾರೆ.

‘ತಪ್ಪಿತಸ್ಥ ಪೊಲೀಸರನ್ನು ರಕ್ಷಿಸಲು ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳು ಮುಂದಾಗಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಚಿವ ಬ್ರಿಜೇಶ್‌ ಪಾಠಕ್‌ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಶಾಕರಾದ ರಜನಿ ತಿವಾರಿ ಹಾಗೂ ರಾಜೇಶ್‌ ಕುಮಾರ್‌ ಮಿಶ್ರಾ ಸಹ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರು ಯೋಗಿ ಆದಿತ್ಯನಾಥ್‌ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. 

₹25 ಲಕ್ಷ ಪರಿಹಾರ

ವಿವೇಕ್‌ ತಿವಾರಿ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರ ₹25 ಲಕ್ಷ ಪರಿಹಾರ ಪ್ರಕಟಿಸಿದೆ.

ಹತ್ಯೆಯಾದ ವಿವೇಕ ತಿವಾರಿ ಪತ್ನಿ ಕಲ್ಪನಾ ತಿವಾರಿ ಅವರು ಕುಟುಂಬ ಸಮೇತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವ
ರನ್ನು ಸೋಮವಾರ ಭೇಟಿ ಮಾಡಿದರು. ತಪ್ಪಿತಸ್ಥರಿಗೆ ಕಠಿಣಯಾಗಬೇಕು ಎಂದರು.

‘ವಿವೇಕ್‌ ಅವರ ಇಬ್ಬರು ಪುತ್ರಿಯರ ಹೆಸರಿನಲ್ಲಿ ತಲಾ ₹5 ಲಕ್ಷ ಮತ್ತು ಅವರ ತಾಯಿಯ ಹೆಸರಿನಲ್ಲಿ ₹5 ಲಕ್ಷ ಠೇವಣಿ ಇರಿಸಲು ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದಾರೆ. ಕಲ್ಪನಾರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು’ ಎಂದು ಉಪಮುಖ್ಯಮಂತ್ರಿ ದಿನೇಶ್‌ ಶರ್ಮಾ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !