ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ಕ್ಕೆ ಭಾರತದಲ್ಲಿ ಆ್ಯಪಲ್‌ ಅಧಿಕೃತ ಮಳಿಗೆ ಆರಂಭ

Last Updated 27 ಫೆಬ್ರುವರಿ 2020, 10:09 IST
ಅಕ್ಷರ ಗಾತ್ರ

ಬೆಂಗಳೂರು:ಆ್ಯಪಲ್ ಈ ವರ್ಷ ಭಾರತದಲ್ಲಿ ಆನ್‌ಲೈನ್‌ ಮಳಿಗೆಯನ್ನುತೆರೆಯಲಿದ್ದು, ಮುಂದಿನ ವರ್ಷ ಮೊದಲ ಆಫ್‌ಲೈನ್ ಮಾರಾಟಮಳಿಗೆಯನ್ನುತೆರೆಯಲಿದೆಎಂದು ಸಂಸ್ಥೆಯಸಿಇಒಟಿಮ್‌ ಕುಕ್‌ಹೇಳಿರುವುದಾಗಿ ವರದಿಯಾಗಿದೆ.

ಕ್ಯಾಲಿಫೊರ್ನಿಯಾದಲ್ಲಿನಡೆದಆ್ಯಪಲ್ ಕಂಪನಿಯಹೂಡಿಕೆದಾರರ ವಾರ್ಷಿಕ ಸಮಾವೇಶದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ವೇಳೆ ಕುಕ್‌ ಅವರು ಈ ವಿಷಯ ಬಹಿರಂಗ ಪಡಿಸಿದ್ದಾರೆಎನ್ನಲಾಗಿದೆ.

ಭಾರತ ಸರ್ಕಾರವುಸಿಂಗಲ್ಬ್ರಾಂಡ್‌ ರಿಟೇಲ್‌ಗೆ ಸಂಬಂಧಿಸಿದಂತೆ ಶೇ 30% ಸ್ಥಳೀಯ ಸಂಪನ್ಮೂಲದ ಕುರಿತನಿಯಮವನ್ನುಸಡಿಲಗೊಳಿಸಿದ ಕೆಲವೇ ತಿಂಗಳಲ್ಲಿಭಾರತದಲ್ಲಿ ಮಳಿಗೆ ತೆರೆಯಲುಆ್ಯಪಲ್ ಮುಂದೆ ಬಂದಿದೆ.

ಭಾರತಸರ್ಕಾರದಿಂದ ನಮಗೆ ಆಪಾರ ಪ್ರಮಾಣದಬೆಂಬಲ ದೊರೆತಿದೆ. ಆದ್ದರಿಂದನಾವು ಭಾರತದಪ್ರಧಾನಿ ಮೋದಿ ಮತ್ತು ಅವರ ತಂಡವನ್ನು ಅಭಿನಂದಿಸುತ್ತೇವೆ ಎಂದು ಕುಕ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT