ಗುರುವಾರ , ಏಪ್ರಿಲ್ 9, 2020
19 °C

ಸಿಗರೇಟು ವ್ಯಸನಿಗಳಿಗೆ ಕೊರೊನಾ ವೈರಸ್‌ ಸೋಂಕು ಸಾಧ್ಯತೆ ಹೆಚ್ಚಿದೆಯೇ? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮೂಲಕ ಉಸಿರಾಟಕ್ಕೆ ಅಡ್ಡಿಯುಂಟು ಮಾಡುತ್ತದೆ ಎನ್ನುವುದು ಈಗಾಗಲೇ ಜನಜನಿತವಾಗಿರುವ ವಿಚಾರ. ಶ್ವಾಸಕೋಶದ ಆರೋಗ್ಯಕ್ಕೂ ದೂಮಪಾನದ ವ್ಯಸನಕ್ಕೂ ನೇರ ಸಂಬಂಧವಿದೆ. ಈ ಹಿನ್ನೆಲೆಯಲ್ಲಿಯೇ 'ಸಿಗರೇಟು ವ್ಯಸನಿಗಳಿಗೆ ಕೊರೊನಾ ವೈರಸ್‌ ಸೋಂಕ ಸಾಧ್ಯತೆ ಹೆಚ್ಚಿದೆಯೇ?' ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಯತ್ನಿಸಿದೆವು.

ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಏನು ಹೇಳಿದೆ? ವೈದ್ಯರು ಏನು ಹೇಳುತ್ತಾರೆ? ಇಲ್ಲಿದೆ ವಿವರ...

ಧೂಮಪಾನ ಮಾಡುವವರಿಗೆ ಕೋವಿಡ್‌ 19 ಸೋಂಕು ತಗುಲುವ ಸಾಧ್ಯತೆ ಬೇರೆಲ್ಲರಿಗಿಂತಲೂ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಶ್ನೋತ್ತರದಲ್ಲಿ ತಿಳಿಸಿದೆ. 

ಕೊರೊನಾ ವೈರಸ್‌ ಪಿಡುಗಾಗಿ ಪರಿಣಮಿಸಿರುವ ಈ ಹೊತ್ತಿನಲ್ಲಿ ಧೂಮಪಾನ ಮಾಡುವುದು ವೈರಸ್‌ ಆಹ್ವಾನಿಸಿಕೊಂಡಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳು ಮತ್ತು ವೈದ್ಯರೂ ಅಭಿಪ್ರಾಯಪಟ್ಟಿದ್ದಾರೆ. 

ಧೂಮಪಾನದ ವ್ಯಸನದಿಂದ ಶ್ವಾಸಕೋಶ ಮತ್ತು ಶ್ವಾಸನಾಳಗಳು ಶಕ್ತಿ ಕಡಿಮೆಯಾಗಿರುತ್ತದೆ. ಇಂಥ ಸಂದರ್ಭದಲ್ಲಿ ಧೂಮ ವ್ಯಸನಿಗಳಿಗೆ, ಶ್ವಾಸಕೋಶವನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವ ಕೊರೊನಾ ವೈರಸ್‌ನ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

‘ಸಿಗರೇಟು ಸೇದುವವರಲ್ಲಿ ಶ್ವಾಸಕೋಶ ಮತ್ತು ಉಸಿರಾಟದ ನಾಳಗಳು ಅದಾಗಲೇ ಹಾನಿಗೊಳಗಾಗಿರುತ್ತದೆ. ಇಂಥ ಸಂದರ್ಭದಲ್ಲಿ ಈ ಹೊಸ ವೈರಸ್‌ ತಾಗಿದರೆ ಅದು ಮಾರಕವಾಗಿ ಪರಿಣಮಿಸಲಿದೆ’ ಎಂದು ಲೂಧಿಯಾನದ ಫೋರ್ಟೀಸ್‌ ಆಸ್ಪತ್ರೆಯ ನಿರ್ದೇಶಕ ಡಾ. ಹರ್ಮೀಂದರ್‌ ಪನ್ನು ಅವರು ಹೇಳಿರುವುದಾಗಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಅಲ್ಲದೆ, ಸಿಗರೇಟು ಸೇದುವ ಚಟ ತೊರೆಯಲು ಇದು ಸಕಾಲ ಎಂಬ ಅವರ ಹೇಳಿಕೆಯನ್ನೂ ಪತ್ರಿಕೆ ಉಲ್ಲೇಖಿಸಿದೆ.

ದಿನಕ್ಕೊಂದು ಸಿಗರೇಟ್ ಸೇದುವವರಿರಲಿ, ಹಲವು ದಿನಗಳಿಗೊಮ್ಮೆ ಸೇದುವವರಿರಲಿ, ನಿರಂತರವಾಗಿ ದಿನಕ್ಕೆ ಹಲವು ಸಿಗರೇಟ್‌ಗಳನ್ನು ಸೇದುವವರಿರಲಿ ಕೋವಿಡ್‌ ಸೋಂಕು ತಗುಲುವ ಸಾಧ್ಯತೆ ಇವರೆಲ್ಲರಿಗೂ ಒಂದೇ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು