ಸೇನಾ ಪಡೆಯಲ್ಲಿ 9 ಸಾವಿರ ಅಧಿಕಾರಿ ಹುದ್ದೆ ಖಾಲಿ

7

ಸೇನಾ ಪಡೆಯಲ್ಲಿ 9 ಸಾವಿರ ಅಧಿಕಾರಿ ಹುದ್ದೆ ಖಾಲಿ

Published:
Updated:
Deccan Herald

ನವದೆಹಲಿ: ದೇಶದ ಮೂರು ಸೇನಾ ಪಡೆಗಳಲ್ಲಿ ಪ್ರಮುಖವಾದ 9,096 ಹುದ್ದೆಗಳು ಖಾಲಿ ಇವೆ ಎಂದು ಬುಧವಾರ ಲೋಕಸಭೆಗೆ ಕೇಂದ್ರ ಸರ್ಕಾರ ತಿಳಿಸಿದೆ.

ಲಿಖಿತ ಪ್ರಶ್ನೆಯೊಂದಕ್ಕೆ ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್‌ ಭಮ್ರೆ ಈ ಉತ್ತರ ನೀಡಿದ್ದಾರೆ.

ಗಡಿ ರಕ್ಷಣಾ ಸಹಕಾರ ಒಪ್ಪಂದದ ಬಗ್ಗೆ ಚೀನಾದಿಂದ ಯಾವುದಾದರೂ ಪ್ರಸ್ತಾ‍ಪ ಬಂದಿದೆ ಎಂದು ಕೇಳಲಾದ ಮತ್ತೊಂದು ಪ್ರಶ್ನೆಗೆ ಸಚಿವರು ‘ಇಲ್ಲ’ವೆಂದು ಉತ್ತರಿಸಿದರು.

2013ರ ಅಕ್ಟೋಬರ್‌ 23ರಂದು ಭಾರತ ಮತ್ತು ಚೀನಾ ನಡುವೆ ಗಡಿ ರಕ್ಷಣಾ ಸಹಕಾರ ಒಪ್ಪಂದ ನಡೆದಿದೆ. ಅದನ್ನು ಹೊರತುಪಡಿಸಿ, ಚೀನಾದಿಂದ ಗಡಿ ಸಹಕಾರ ಒಪ್ಪಂದದ ಬಗ್ಗೆ ಯಾವುದೇ ಹೊಸ ಪ್ರಸ್ತಾವ ಬಂದಿಲ್ಲ ಎಂದರು.

ಚೀನಾ ಜತೆಗೆ ರಕ್ಷಣಾ ಸಹಕಾರ ಬಲಪಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಗಡಿಯುದ್ದಕ್ಕೂ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಮಿಲಿಟರಿ ಬಲವರ್ಧನೆಗೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !