ಶನಿವಾರ, ಅಕ್ಟೋಬರ್ 19, 2019
27 °C

ಕಾಶ್ಮೀರ | ಗಡಿಯಲ್ಲಿ ಪಾಕ್‌ ಸೇನೆಯಿಂದ ಶೆಲ್‌ ದಾಳಿ: ಯೋಧ ಸಾವು

Published:
Updated:
ಗಡಿಯಲ್ಲಿ ಯೋಧರು –ಸಾಂದರ್ಭಿಕ ಚಿತ್ರ

ಜಮ್ಮು: ಜಮ್ಮು ಮತ್ತು ಕಾಶ್ಮಿರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಸೇನೆ ಶುಕ್ರವಾರ ಶೆಲ್‌ ಮತ್ತು ಗುಂಡಿನ ದಾಳಿ ಮಾಡಿದ್ದು, ಒಬ್ಬ ಭಾರತೀಯ ಯೋಧ ಸಾವಿಗೀಡಾಗಿದ್ದಾರೆ ಎಂದು ರಕ್ಷಣಾಪಡೆ ವಕ್ತಾರರು ತಿಳಿಸಿದ್ದಾರೆ. 

ಜಮ್ಮು ಜಿಲ್ಲೆಯ ಅಖ್ನೂರ್‌ ವಲಯದಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಶೆಲ್‌ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಇಂದು ಬೆಳಿಗ್ಗೆ 5.30ರಿಂದ 70.30ವರೆಗೆ ನೌಶೇರಾ ವಲಯದಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನ ಪಡೆ ಗುಂಡಿನ ದಾಳಿ ನಡೆಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಪಡೆಯ ಗುಂಡಿನ ದಾಳಿಗೆ ಗಾಯಗೊಂಡಿದ್ದ ಯೋಧ ನಾಯಕ್‌ ಸುಭಾಷ್‌ ಥಾಪಾ(25) ಮೃತಪಟ್ಟಿದ್ದಾರೆ. ದಾಳಿಯಲ್ಲಿ ಗಾಯಗೊಂಡಿದ್ದ ಅವರನ್ನು ಸೇನೆಯ ಕಮಾಂಡರ್‌ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅವರು ಬದುಕುಳಿಯಲಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.

Post Comments (+)