ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಗುಣಮಟ್ಟದ ಯುದ್ಧಸಾಮಗ್ರಿ ಪೂರೈಸಿ: ರಕ್ಷಣಾ ಇಲಾಖೆಗೆ ಸೇನಾಪಡೆಯಿಂದ ಬೇಡಿಕೆ

ರಕ್ಷಣಾ ಇಲಾಖೆಗೆ ಬೇಡಿಕೆ ಇರಿಸಿದ ಸೇನಾಪಡೆ l ಅವಘಡಗಳ ವರದಿ ಸಲ್ಲಿಕೆ
Last Updated 15 ಮೇ 2019, 2:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉತ್ತಮ ಗುಣಮಟ್ಟದ ಯುದ್ಧ ಸಾಮಗ್ರಿಗಳ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ರಕ್ಷಣಾ ಇಲಾಖೆಗೆ ಸೇನೆ ಮನವಿ ಮಾಡಿದೆ.

‘ಸರ್ಕಾರಿ ಸ್ವಾಮ್ಯದ ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಒಎಫ್‌ಬಿ) ಸರಬರಾಜು ಮಾಡುತ್ತಿರುವ ಯುದ್ಧ ಸಾಮಗ್ರಿಗಳು ಕಡಿಮೆ ಗುಣಮಟ್ಟದ್ದಾಗಿದ್ದು, ಇದರಿಂದಾಗಿಈಚೆಗೆ ಯುದ್ಧನೌಕೆ, ಬಂದೂಕುಗಳು ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳು ಹಾನಿಗೊಳಗಾಗು
ತ್ತಿವೆ. ಇವುಗಳಿಂದ ಅವಘಡಗಳು ಸಹ ಸಂಭವಿಸುತ್ತಿವೆ’ ಎಂದುಸೇನಾಪಡೆ ಹೇಳಿದೆ.

‘ಯುದ್ಧಸಾಮಗ್ರಿಗಳ ಗುಣಮಟ್ಟ ಕುರಿತುರಕ್ಷಣಾ ಇಲಾಖೆ ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಸೇನಾಪಡೆ ಮನವಿ ಮಾಡಿತ್ತು.ರಕ್ಷಣಾ ಕಾರ್ಯದರ್ಶಿ (ಉತ್ಪಾದನೆ) ಅಜಯ್ ಕುಮಾರ್ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಲಾಗಿತ್ತು’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಸೇನೆಯ ಮನವಿ ಮೇರೆಗೆ ರಕ್ಷಣಾ ಇಲಾಖೆ ಈ ಕುರಿತು ಪರಿಶೀಲಿಸಿದಾಗ, ಶಸ್ತ್ರಾಸ್ತ್ರಗಳ ಗುಣಮಟ್ಟ ಸುಧಾರಣೆಗೆ ಒಎಫ್‌ಬಿ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ತಿಳಿದುಬಂದಿದೆ’ ಎಂದು ಸಹ ಮೂಲಗಳು ಹೇಳಿವೆ.

‘ಟಿ–72, ಟಿ–90 ಬಂದೂಕುಗಳು, 130 ಮಿ.ಮೀ. ಎಂಎ1 ಮಧ್ಯಮ ಶ್ರೇಣಿಯ ಬಂದೂಕುಗಳು, ವೈಮಾನಿಕ ಪಡೆಯ 40 ಮಿ.ಮೀ. ಎಲ್‌–70 ಬಂದೂಕುಗಳು ಅವಘಡಗಳಿಗೆ ಗುರಿಯಾಗಿವೆ. ಕಡಿಮೆ ಗುಣಮಟ್ಟದ ಶಸ್ತ್ರಾಸ್ತ್ರಗಳಿಂದ ಸೇನೆಯ ಸಿಬ್ಬಂದಿ ಸಹ ಗಾಯಗೊಂಡಿರುವ ಹಲವು ಪ್ರಕರಣಗಳಿವೆ.ಈ ಕುರಿತವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಲಾಗಿದೆ’ ಎಂದುಸೇನಾಪಡೆ ಹೇಳಿದೆ.

2017ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಫಿರಂಗಿ ಎಂ–777 ಅನ್ನು ಪೋಖ್ರಾನ್‌ನಲ್ಲಿ ಪರೀಕ್ಷೆ ನಡೆಸುತ್ತಿದ್ದ ವೇಳೆ ಅವಘಡ ಉಂಟಾಗಿತ್ತು. ದೋಷಪೂರಿತ ಯುದ್ಧಸಾಮಗ್ರಿಯಿಂದಲೇ ಹೀಗಾಗಿದೆ ಎಂದು ಅಮೆರಿಕ ಹಾಗೂ ಭಾರತೀಯ ಸೇನಾಪಡೆ ಹೇಳಿತ್ತು.

ಪರಿಶೀಲನೆ ಬಳಿಕ ಸರಬರಾಜು

ಗುಣಮಟ್ಟದ ಕುರಿತು ಪ್ರತಿಕ್ರಿಯಿಸಿರುವ ಒಎಫ್‌ಬಿ, ‘ಬಿಡಿ ಉಪಕರಣಗಳನ್ನು ನಿಗದಿತ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ. ಗುಣಮಟ್ಟ ಖಾತ್ರಿ ನಿರ್ದೇಶನಾಲಯದ ಗುಣಮಟ್ಟ ನಿಯಂತ್ರಣ ಇಲಾಖೆ ಕೂಲಂಕಷ ಪರಿಶೀಲನೆ ನಡೆಸಿದ ಬಳಿಕವೇ ಭಾರತೀಯ ಸೇನೆಗ ಯುದ್ಧಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತದೆ’ ಎಂದು ಹೇಳಿದೆ.

‘ಯುದ್ಧಸಾಮಗ್ರಿಗಳ ಉತ್ಪಾದನೆ ಮತ್ತು ಸರಬರಾಜು ಮಾತ್ರ ನಮ್ಮ ಹೊಣೆ. ಆದರೆ ಸೇನೆ ಇವುಗಳ ದಾಸ್ತಾನು ಹಾಗೂ ಬಳಕೆಯನ್ನು ಹೇಗೆ ನಿರ್ವಹಿಸುತ್ತದೆ ಎಂದು ತಿಳಿದಿಲ್ಲ. ಯುದ್ಧಸಾಮಗ್ರಿಗಳ ಸ್ಥಿತಿಗತಿ ಸಹ ದೋಷ/ಅವಘಡಗಳಿಗೆ ಕಾರಣವಾಗುತ್ತದೆ’ ಎಂದುಒಎಫ್‌ಬಿ ತಿಳಿಸಿದೆ.

ರಕ್ಷಣಾ ಸಚಿವಾಲಯದಉತ್ಪಾದನಾ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಎಫ್‌ಬಿ, ದೇಶದಾದ್ಯಂತ 41 ಕಾರ್ಖಾನೆಗಳನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT