ಗುಟ್ಕಾ ಹಗರಣ: ಐವರ ಬಂಧನ

7

ಗುಟ್ಕಾ ಹಗರಣ: ಐವರ ಬಂಧನ

Published:
Updated:

ಚೆನ್ನೈ: ತಮಿಳುನಾಡಿನ ಆರೋಗ್ಯ ಸಚಿವ ಸಿ. ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಟಿ.ಕೆ. ರಾಜೇಂದ್ರನ್ ಮತ್ತು ಚೆನ್ನೈ ಪೊಲೀಸ್ ಆಯುಕ್ತ ಎಸ್. ಜಾರ್ಜ್ ಭಾಗಿಯಾಗಿದ್ದಾರೆ ಎನ್ನಲಾದ ಬಹುಕೋಟಿ ಗುಟ್ಕಾ ಹಗರಣಕ್ಕೆ ಸಂಬಂಧಿದಂತೆ ಸಿಬಿಐ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.

ಎಂಡಿಎಂ ಗುಟ್ಕಾ ಕಂಪನಿ ಮಾಲೀಕರಾದ ಎ.ವಿ. ಮಾಧವರಾವ್, ಉಮಾಶಂಕರ ಗುಪ್ತಾ ಮತ್ತು ಶ್ರೀನಿವಾಸರಾವ್, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿ ಪಿ. ಸೆಂತಿಲ್ ಮುರುಗನ್ ಮತ್ತು ಕೇಂದ್ರ ಅಬಕಾರಿ ಇಲಾಖೆ ಅಧೀಕ್ಷಕ ಎನ್.ಕೆ. ಪಾಂಡಿಯನ್ ಬಂಧಿತರು. ಈ ಪ್ರಕರಣದಲ್ಲಿ  ಮೊದಲ ಬಂಧನ ಇದಾಗಿದ್ದು, ಎಲ್ಲರನ್ನು ಸಿಬಿಐ ನ್ಯಾಯಾಲಯ ಇದೇ 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

2016ರಲ್ಲಿ ಮಾಧವ ರಾವ್ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಶೋಧ ನಡೆಸಿದ್ದಾಗ ‘ನಿಷೇಧಿತ ಗುಟ್ಕಾ ಮಾರಾಟಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ವಿಜಯಭಾಸ್ಕರ್, ರಾಜೇಂದ್ರನ್ ಮತ್ತು ಜಾರ್ಜ್‌ಗೆ ₹ 40 ಕೋಟಿ ಲಂಚ ನೀಡಲಾಗಿದೆ’ ಎಂದು ಬರೆದಿರುವ ಡೈರಿ ಸಿಕ್ಕಿತ್ತು. ಈ ಪ್ರಕರಣದ ಪ್ರಮುಖ ಸಾಕ್ಷ್ಯ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !