ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಬಾಹುಳ್ಯ ರಾಜ್ಯವಾಗಿದ್ದರೆ 370ನೇ ವಿಧಿ ರದ್ದಾಗುತ್ತಿರಲಿಲ್ಲ: ಚಿದಂಬರಂ

ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ
Last Updated 12 ಆಗಸ್ಟ್ 2019, 4:53 IST
ಅಕ್ಷರ ಗಾತ್ರ

ಚೆನ್ನೈ:ಜಮ್ಮು ಮತ್ತು ಕಾಶ್ಮೀರವು ಹಿಂದೂ ಬಾಹುಳ್ಯವಿರುವ ರಾಜ್ಯವಾಗಿದ್ದರೆ ಆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಕಸಿಯುತ್ತಿರಲಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯು ಬಲ ಪ್ರಯೋಗದ ಮೂಲಕ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಸ್ಥಿರತೆ ಇದೆ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಆ ಕುರಿತು ವರದಿಯಾಗುತ್ತಿದೆ. ಆದರೆ, ಭಾರತೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿಲ್ಲ ಎಂದು ಅವರು ಟೀಕಿಸಿದ್ದಾರೆ.

‘ಅವರು (ಬಿಜೆಪಿ) ಕಾಶ್ಮೀರ ಸ್ಥಿರವಾಗಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಇದು ನಿಜವೇ? ಜಮ್ಮು ಮತ್ತು ಕಾಶ್ಮೀರದಲ್ಲಿನ ಅಶಾಂತಿ ಕುರಿತು ಭಾರತೀಯ ಮಾಧ್ಯಮಗಳು ವರದಿ ಮಾಡಿಲ್ಲವೆಂದ ಮಾತ್ರಕ್ಕೆ ಅಲ್ಲಿ ಶಾಂತಿ ನೆಲೆಸಿದೆ ಎಂದರ್ಥವೇ?’ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.

ಏಳು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಪ್ರಾದೇಶಕ ಪಕ್ಷಗಳ ಬಗ್ಗೆ ಉಲ್ಲೇಖಿಸಿದ ಅವರು, ಆ ಪಕ್ಷಗಳು ಬಿಜೆಪಿ ವಿರುದ್ಧದ ನಮ್ಮ ನಿಲುವನ್ನು ಕೇಂದ್ರದ ಮೇಲಿನ ಹೆದರಿಕೆಯಿಂದಾಗಿ ಬೆಂಬಲಿಸಲಿಲ್ಲ ಎಂದು ಹೇಳಿದರು.

ವಿಶೇಷ ಸ್ಥಾನಮಾನ ರದ್ದತಿ ವಿಚಾರದಲ್ಲಿ ಪ್ರತಿಪಕ್ಷಗಳ ಸಹಕಾರ ದೊರೆಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಲೋಕಸಭೆಯಲ್ಲಿ ನಮಗೆ ಬಹುಮತ ಇಲ್ಲ ಎಂದು ನನಗೆ ತಿಳಿದಿದೆ. ಆದರೆ ರಾಜ್ಯಸಭೆಯಲ್ಲಿ ಏಳು ಪಕ್ಷಗಳು (ಎಐಎಡಿಎಂಕೆ, ವೈಎಸ್‌ಆರ್‌ಸಿಪಿ, ಟಿಆರ್‌ಎಸ್, ಬಿಜೆಡಿ, ಎಎಪಿ, ಟಿಎಂಸಿ, ಜೆಡಿಯು) ಸಹಕಾರ ನೀಡಿದ್ದರೆ ಬಹುಮತ ನಮ್ಮದಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಇದು ನಿರಾಶೆಯ ವಿಚಾರ’ ಎಂದು ಹೇಳಿದರು.‌

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಭಾತ್ಯಾಗ ನಡೆಸಿತು. ಇದರಿಂದ ವ್ಯತ್ಯಾಸವೇನು ಎಂದು ಚಿದಂಬರಂ ಪ್ರಶ್ನಿಸಿದರು.

‘ಜಮ್ಮು–ಕಾಶ್ಮೀರದ ಸೌರಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ ಸುಮಾರು 10 ಸಾವಿರ ಜನರ ವಿರುದ್ಧ ಪೊಲೀಸರು ಕ್ರಮ ಕೈಗೊಂಡರು. ಪ್ರತಿಭಟನೆ ವೇಳೆ ಪೊಲೀಸರು ಶೂಟಿಂಗ್ ನಡೆಸಿದ್ದು ನಿಜ. ಬಿಜೆಪಿಯ ನಿಲುವನ್ನು ಖಂಡಿಸಲು ಸಾರ್ವಜನಿಕ ಸಭೆ ಸೇರಿದ್ದವರ ಮೇಕೆ ಕ್ರಮ ಕೈಗೊಳ್ಳಲಾಯಿತು’ ಎಂದು ಚಿದಂಬರಂ ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT