ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶೇಷಾಧಿಕಾರ ರದ್ದು ಆಂತರಿಕ ವಿಚಾರ’

Last Updated 6 ಆಗಸ್ಟ್ 2019, 19:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಮ್ಮು ಕಾಶ್ಮೀರ ವಿಚಾರದಲ್ಲಿ ಶಾಂತಿ ಕಾಪಾಡುವಂತೆ ಅಮೆರಿಕವು ಸಂಬಂಧಪಟ್ಟ ಎಲ್ಲರಲ್ಲೂ ಮನವಿ ಮಾಡಿದೆ.

ಪಾಕಿಸ್ತಾನದ ಹೆಸರು ಉಲ್ಲೇಖಿಸ ದೆಯೇ ಹೇಳಿಕೆ ನೀಡಿರುವ ಅಮೆರಿಕದ ವಿದೇಶಾಂಗ ವ್ಯವಹಾರಗಳ ವಕ್ತಾರ ಮಾರ್ಗನ್‌ ಒರ್ಟೆಗಸ್‌ ಅವರು, ‘ಜಮ್ಮು ಕಾಶ್ಮೀರದ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸಂಬಂಧಪಟ್ಟ ಎಲ್ಲರೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡುತ್ತೇವೆ’ ಎಂದಿದ್ದಾರೆ.

‘370ನೇ ವಿಧಿಯನ್ನು ಅಸಿಂಧುಗೊಳಿಸುವುದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ’ ಎಂದೂ ಅಮೆರಿಕ ಹೇಳಿದೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ಅಸಿಂಧುಗೊಳಿಸುವ ಮತ್ತು ರಾಜ್ಯವನ್ನು ವಿಭಜಿಸುವ ನಿರ್ಧಾರದ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಅಮೆರಿಕ, ಬ್ರಿಟನ್‌, ಚೀನಾ, ಫ್ರಾನ್ಸ್‌ ಹಾಗೂ ರಷ್ಯಾ ಒಳಗೊಂಡ ‘ಪಿ5’ ರಾಷ್ಟ್ರಗಳಿಗೆ ಮಾಹಿತಿ ನೀಡಿದೆ.

ಭಾರತದ ಆಂತರಿಕ ವಿಚಾರ- ಲಂಕಾ: ‘ಲಡಾಖ್‌ ಅನ್ನು ಕೇಂದ್ರಾಡಳಿತ ಪ್ರದೇಶ ವಾಗಿಸುವುದು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ’ ಎಂದು ಶ್ರೀಲಂಕಾದ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ‘ಕೊನೆಗೂ ಲಡಾಖ್‌ ಭಾರತದ ಭಾಗವಾಗಿದೆ. ಇಲ್ಲಿನ ಜನಸಂಖ್ಯೆಯ ಶೇ 70ರಷ್ಟು ಮಂದಿ ಬೌದ್ಧರಾಗಿದ್ದಾರೆ. ಇದು ಬೌದ್ಧರೇ ಬಹುಸಂಖ್ಯೆ ಯಲ್ಲಿರುವ ಭಾರತದ ಮೊದಲ ರಾಜ್ಯ ಎನಿಸಲಿದೆ. ಈ ಹಿಂದೆ ಲಡಾಖ್‌ಗೆ ಭೇಟಿನೀಡಿದ್ದೆ. ಅದು ಸುಂದರ ಪ್ರದೇಶ’ ಎಂದಿದ್ದಾರೆ.

ಚೀನಾ ವಿರೋಧ: ಭಾರತ ತಿರುಗೇಟು

ಬೀಜಿಂಗ್: ಲಡಾಖ್‌ ಅನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಭಾರತದ ಕ್ರಮವನ್ನು ಚೀನಾ ವಿರೋಧಿಸಿದೆ.ಕಾಶ್ಮೀರ ವಿಚಾರದಲ್ಲಿ ಸಂಯಮ ಕಾಯ್ದುಕೊಳ್ಳುವಂತೆ ಭಾರತ ಹಾಗೂ ಪಾಕಿಸ್ತಾನಗಳಿಗೆ ಅದು ಸಲಹೆ ನೀಡಿದೆ.

ಚೀನಾ ಹೇಳಿಕೆಗೆ ತಿರುಗೇಟು ನೀಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ‘ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ಭಾರತ ಮಧ್ಯಪ್ರವೇಶಿಸುವುದಿಲ್ಲ. ಇದೇ ರೀತಿಯ ಸೌಜನ್ಯವನ್ನು ಬೇರೆ ದೇಶಗಳಿಂದ ಭಾರತ ನಿರೀಕ್ಷಿಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT