ಕೇಂದ್ರ ಹಣಕಾಸು ಸಚಿವರಾಗಿ ಮರಳಿ ಅಧಿಕಾರ ವಹಿಸಿಕೊಂಡ ಜೇಟ್ಲಿ

ನವದೆಹಲಿ: ಮೂತ್ರಪಿಂಡ ಕಸಿ ಚಿಕಿತ್ಸೆ ಕಾರಣಕ್ಕೆ ಕೆಲ ತಿಂಗಳಿನಿಂದ ಸಚಿವ ಹುದ್ದೆ ಹೊಣೆಗಾರಿಕೆಯಿಂದ ದೂರ ಉಳಿದಿದ್ದ ಅರುಣ್ ಜೇಟ್ಲಿ (65) ಅವರು ಗುರುವಾರ ಮತ್ತೆ ಕೇಂದ್ರ ಹಣಕಾಸು ಸಚಿವರಾಗಿ ಅಧಿಕಾರ
ವಹಿಸಿಕೊಂಡರು.
ಪ್ರಧಾನಿ ಸಲಹೆ ಮೇರೆಗೆ, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು, ಜೇಟ್ಲಿ ಅವರಿಗೆ ಹಣಕಾಸು ಮತ್ತು ಕಂಪನಿ ವ್ಯವಹಾರ ಸಚಿವ ಹುದ್ದೆಯ ಹೊಣೆಗಾರಿಕೆ ವಹಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮೇ 14ರಿಂದ ಹಣಕಾಸು ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆಯನ್ನು ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರಿಗೆ ಒಪ್ಪಿಸಲಾಗಿತ್ತು. ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ಜೇಟ್ಲಿ ಅವರು ಕಚೇರಿಗೆ ಭೇಟಿ ಕೊಟ್ಟರು.
ಪ್ರತಿಕ್ರಿಯಿಸಿ (+)