ಸೋಮವಾರ, ಸೆಪ್ಟೆಂಬರ್ 16, 2019
23 °C
ದೆಹಲಿಯ ಏಮ್ಸ್‌ನಲ್ಲಿ ‘ಇಸಿಎಂಒ’ ಚಿಕಿತ್ಸೆ

ಅರುಣ್‌ ಜೇಟ್ಲಿ ಸ್ಥಿತಿ ತೀವ್ರ ಗಂಭೀರ

Published:
Updated:
Prajavani

ನವದೆಹಲಿ: ತೀವ್ರ ಅನಾರೊಗ್ಯದಿಂದಾಗಿ ದೆಹಲಿಯ ಅಖಿಲ ಭಾರತ ವೈದ್ಯಕೀಯ ಸಂಸ್ಥೆಯಲ್ಲಿ (ಏಮ್ಸ್‌) ಚಿಕಿತ್ಸೆ ಪಡೆಯುತ್ತಿರುವ  ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

ಜೇಟ್ಲಿ ಅವರಿಗೆ ‘ಇಸಿಎಂಒ’ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಶ್ವಾಸಕೋಶವು ವ್ಯಕ್ತಿಯ ದೇಹ ಬದುಕುಳಿಯಲು ಬೇಕಾದಷ್ಟು ಆಮ್ಲಜನಕವನ್ನು ಪೂರೈಸಲು ಸಾಧ್ಯವಾಗದೇ ಇದ್ದಾಗ ಈ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ಹೃದಯವು ರಕ್ತ ಪೂರೈಸಲು ನೆರವಾಗುವ ‘ಐಎಬಿಪಿ’ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.

ಆಗಸ್ಟ್ 9ರಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರೂ, ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಮತ್ತು ಆರೋಗ್ಯ ಸ್ಥಿತಿಯ ಬಗ್ಗೆ ಏಮ್ಸ್‌ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

Post Comments (+)