ಶುಕ್ರವಾರ, ನವೆಂಬರ್ 15, 2019
22 °C

ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ

Published:
Updated:

ಗುವಾಹಟಿ: ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿ ಬಿಜೆಪಿ ಶಾಸಕರೊಬ್ಬರನ್ನು ಭೇಟಿಯಾಗಲು ಇಟಾನಗರದಲ್ಲಿ ಹೋಟೆಲ್‌ಗೆ ತೆರಳಿದ್ದ ಸಂದರ್ಭದಲ್ಲಿ ಶಾಸಕರು ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ವೈದ್ಯೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.

ಬೆಮೆಂಗ್‌ ವಿಧಾನಸಭಾ ಕ್ಷೇತ್ರದ ಶಾಸಕ ಗೊರುಕ್‌ ಪೊರ್ದುಂಗ್‌ ಅವರ ವಿರುದ್ಧ ವೈದ್ಯೆ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಆದರೆ ಪೊರ್ದುಂಗ್‌ ಅವರು ಈ ಆರೋಪವನ್ನು ನಿರಾಕರಿಸಿದ್ದು, ವೈದ್ಯೆಯು ತಮ್ಮ ವರ್ಚಸ್ಸಿಗೆ ಧಕ್ಕೆ ಬರುವಂತಹ ಆರೋಪ ಮಾಡುತ್ತಿದ್ದಾರೆ ಎಂದು  ಆಕೆ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. 

‘ಅಕ್ಟೋಬರ್‌ 12ರಂದು ರಾತ್ರಿ 8 ಗಂಟೆಗೆ ತಮ್ಮನ್ನು ಹೋಟೆಲ್‌ಗೆ ಕರೆಸಿಕೊಂಡ ಶಾಸಕರು, ಬಲವಂತವಾಗಿ ಮದ್ಯ ಕುಡಿಸಿದರು. ಅತ್ಯಾಚಾರದ ಬಳಿಕ ತಮಗೆ ಗೊತ್ತಿರುವ ಕೆಲವರೊಂದಿಗೆ ನನ್ನನ್ನು ಮನೆಗೆ ಕಳುಹಿಸಲಾಯಿತು’ ಎಂದು ಆಕೆ ದೂರಿನಲ್ಲಿ ವಿವರಿಸಿದ್ದಾರೆ.

ಎರಡೂ ಪ್ರಕರಣಗಳನ್ನು ಮಹಿಳಾ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲಾಗಿದೆ.

ಪ್ರತಿಕ್ರಿಯಿಸಿ (+)