ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೋಟಾರು ವಾಹನ ಮಸೂದೆ’ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅರವಿಂದ ಕೇಜ್ರಿವಾಲ್

Last Updated 13 ಸೆಪ್ಟೆಂಬರ್ 2019, 9:30 IST
ಅಕ್ಷರ ಗಾತ್ರ

ನವದೆಹಲಿ:ಸೆಪ್ಟೆಂಬರ್‌ 1ರಿಂದ ದೇಶದಾದ್ಯಂತ ಜಾರಿಗೆಯಾಗಿರುವಮೋಟಾರು ವಾಹನ ಮಸೂದೆ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಸೂದೆಯಿಂದ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಮೋಟಾರು ವಾಹನ ಮಸೂದೆ ಜಾರಿಯಾದ ಬಳಿಕ ದೆಹಲಿಯ ಸಂಚಾರ ದಟ್ಟಣೆಯಲ್ಲಿಇಂದೆಂದಿಗಿಂತಲೂಹೆಚ್ಚು ಸುಧಾರಣೆಯಾಗಿದೆ. ಒಂದುವೇಳೆ ಯಾವುದೇ ವರ್ಗದ ಜನರು ಮಸೂದೆಯಿಂದಸಮಸ್ಯೆ ಎದುರಿಸುತ್ತಿದ್ದಾರೆ ಎಂದರೆ ದಂಡದ ದರ ಕಡಿಮೆ ಮಾಡಲು ನಮಗೆ ಅಧಿಕಾರವಿದೆ’ ಎಂದುಹೇಳಿದ್ದಾರೆ.

ದುಬಾರಿ ದಂಡ ಪರಿಷ್ಕರಣೆ ಮಾಡುವ ಸಂಬಂಧಹಲವು ರಾಜ್ಯಗಳಲ್ಲಿ ಚಿಂತನೆ ನಡೆಯುತ್ತಿರುವ ಹೊತ್ತಿನಲ್ಲೇ ಕೇಜ್ರಿವಾಲ್‌ ಈ ರೀತಿಯ ಹೇಳಿಕೆ ನೀಡಿದ್ದಾರೆ.

‘ನಮ್ಮ ಉದ್ದೇಶ ಜೀವಗಳನ್ನು ಉಳಿಸುವುದೇ ಹೊರತು, ಆದಾಯ ಗಳಿಸುವುದಲ್ಲ. 10 ವರ್ಷಗಳಲ್ಲಿ ರಸ್ತೆ ಅಪಘಾತಗಳಿಂದ 15 ಲಕ್ಷಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ದಂಡದ ಮೊತ್ತವನ್ನು ಆಯಾ ರಾಜ್ಯ ಸರ್ಕಾರಗಳು ಕಡಿತಗೊಳಿಸಬಹುದು’ ಎಂದುಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT