ಸೋಮವಾರ, ಆಗಸ್ಟ್ 26, 2019
21 °C

ಅಕ್ಟೋಬರ್ 29ರಿಂದ ದೆಹಲಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ 

Published:
Updated:

ನವದೆಹಲಿ: ದೆಹಲಿಯ ಮಹಿಳೆಯರು ದೆಹಲಿ ಸಾರಿಗೆ ಸಂಸ್ಥೆ  (ಡಿಟಿಸಿ ) ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಅಕ್ಟೋಬರ್ 29ರಿಂದ ಉಚಿತ ಪ್ರಯಾಣ ಮಾಡಬಹುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 

ದೆಹಲಿಯಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, ರಕ್ಷಾ ಬಂಧನ ದಿನದಂದು ನಾನು ನನ್ನ ಸಹೋದರಿಯರಿಗೆ ಉಡುಗೊರೆಯೊಂದನ್ನು ನೀಡುತ್ತಿದ್ದೇನೆ. ಅಕ್ಟೋಬರ್ 29ರ ನಂತರ ಮಹಿಳೆಯರು ಎಲ್ಲ ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದಿದ್ದಾರೆ.

ದೆಹಲಿಯಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ.

ಮಹಿಳೆಯರು ಸಾರ್ವಜನಿಕ ಸಂಪರ್ಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹ ನೀಡುವುದಕ್ಕಾಗಿ ದೆಹಲಿ ಮೆಟ್ರೊ ಮತ್ತು ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಲಾಗುವುದು ಎಂದು ಕೇಜ್ರಿವಾಲ್ ಜೂನ್ ತಿಂಗಳಲ್ಲಿ ಹೇಳಿದ್ದರು.
 

Post Comments (+)