ಅರವಿಂದ್ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ

7

ಅರವಿಂದ್ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದಾಳಿ

Published:
Updated:

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಜನರ ಗುಂಪೊಂದು ಶುಕ್ರವಾರ ದಾಳಿ ನಡೆಸಿದೆ.

ದೊಣ್ಣೆ ಮತ್ತು ಇತರ ಆಯುಧಧಾರಿಗಳಾದ ಜನರ ಗುಂಪು ಪಶ್ಚಿಮ ದೆಹಲಿಯ  ನರೇಲಾ ಎಂಬಲ್ಲಿ ದಾಳಿ ನಡೆಸಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಸಿಎಂ ಕಚೇರಿ ಹೇಳಿದೆ.

100ರಷ್ಟು ಮಂದಿ ಕೇಜ್ರಿವಾಲ್ ಅವರ ಕಾರಿಗೆ ತಡೆಯೊಡ್ಡಿ ದೊಣ್ಣೆಯಿಂದ ಹೊಡೆದು ಕಾರಿಗೆ ಹಾನಿ ಮಾಡಿದ್ದರು. 

25 ಅನಧಿಕೃತ ಕಾಲೊನಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲು ಕೇಜ್ರಿವಾಲ್ ದೆಹಲಿಯ ಹೊರವಲಯಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.

ಬರಹ ಇಷ್ಟವಾಯಿತೆ?

 • 5

  Happy
 • 4

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !