ಮಂಗಳವಾರ, ನವೆಂಬರ್ 19, 2019
28 °C

ಭಾರತವನ್ನು ಹಿಂದೂರಾಷ್ಟ್ರ ಮಾಡಲು ಬಿಡುವುದಿಲ್ಲ: ಅಸಾದುದ್ದೀನ್ ಒವೈಸಿ

Published:
Updated:
Asaduddin Owaisi

ಥಾಣೆ: ಭಾರತ ಹಿಂದೂರಾಷ್ಟ್ರ ಅಲ್ಲ, ನಾವು ಭಾರತವನ್ನು ಹಿಂದೂರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. 

ಭಾರತ ಹಿಂದೂರಾಷ್ಟ್ರವನ್ನಾಗಿ  ಮಾಡುವ ಕನಸು ರಾಷ್ಟ್ರೀಯ ಸ್ವಯಂ ಸೇವಕ ಸಂಘದ್ದು ಎಂದು  ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.

ಇದನ್ನೂ ಓದಿ: ದೇಶಕ್ಕೆ ಅಪಖ್ಯಾತಿ ತರಲು ಗುಂಪು ಹಲ್ಲೆ ಪ್ರಕರಣಗಳನ್ನು ಬಳಸಬೇಡಿ: ಮೋಹನ್ ಭಾಗವತ್

 ಸೋಮವಾರ ರಾತ್ರಿ  ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಅಯಾಜ್ ಮೌಲ್ವಿ  ಪರ ಚುನಾವಣಾ ಪ್ರಚಾರ ಮಾಡಿದ ಒವೈಸಿ , ಸಮಾಜದ ಒಂದು ವಿಭಾಗವು ಇಡೀ ದೇಶಕ್ಕೆ ಒಂದು ಬಣ್ಣ ಬಳಿಯಲು ಬಯಸುತ್ತಿದ್ದಾರೆ. ಆದರೆ ಹಿಂದೂಸ್ತಾನ ಹಲವಾರು ಬಣ್ಣಗಳಿಂದ ಕೂಡಿದೆ. ಹಿಂದೂಸ್ತಾನದ ಸೌಂದರ್ಯವೇ ಅದು.

 ಭಾರತ ಹಿಂದೂರಾಷ್ಟ್ರ ಅಲ್ಲ. ನಾವು ಅದನ್ನು ಹಿಂದೂರಾಷ್ಟ್ರ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.
 ಶಿವಸೇನೆಗೆ ಹಸಿರು ಬಣ್ಣ ಕಂಡರೆ  ಆಗದು ಎಂದು ಆರೋಪಿಸಿದ ಒವೈಸಿ, ನೀವು ನಿಮ್ಮ ಕನ್ನಡಕ ಬದಲಿಸಿ. ರಾಷ್ಟ್ರಧ್ವಜದಲ್ಲಿಯೂ ಹಸಿರು ಬಣ್ಣ ಇದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಮೋದಿಯನ್ನು ರಾಷ್ಟ್ರಪಿತ ಮಾಡುವ ಹುನ್ನಾರ: ಒವೈಸಿ

ಜಾತ್ಯಾತೀತ ಮತ್ತು ಬಹುತ್ವದಿಂದಲೇ ಭಾರತ ವಿಶಿಷ್ಟ ಎನಿಸಿಕೊಂಡಿದೆ. ಭಾರತದಂತೆ ಜಗತ್ತಿನಲ್ಲಿ ಯಾವುದೇ ದೇಶ ಇಲ್ಲ. ಅದರ ಬಗ್ಗೆ ಹೆಮ್ಮೆ ಇದೆ. ನಿಮ್ಮ ಅನುಕಂಪದಿಂದ ನಾವು ಇಲ್ಲಿಬದುಕುತ್ತಿಲ್ಲಎಂಬುದನ್ನು ನಾನು ಆರ್‌ಎಸ್‌ಎಸ್‌ಗೆ ಹೇಳ ಬಯಸುತ್ತೇನೆ. ನನ್ನ ಖುಷಿ ಅಥವಾ ಬೇಸರದ ಸೂಚ್ಯಂಕ ಅಳತೆ  ಮಾಡಿದರೆ ನಮಗೆ ಮತ್ತು ನಿಮಗೆ ಸಂವಿಧಾನ ಏನು ಕೊಟ್ಟಿದೆ ಎಂಬುದನ್ನು ನೋಡಬಹುದು.

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವು ತನ್ನದೇ ಸಾಮರ್ಥ್ಯದಿಂದ ಔರಂಗಬಾದ್‌ನಲ್ಲಿ ಸ್ಥಾಪನೆಗೊಂಡಿತ್ತು. ಇದನ್ನು ನಾವು ಮತ್ತಷ್ಟು ವಿಸ್ತರಿಸುತ್ತೇವೆ. ನಿಮ್ಮಿಂದ  ತಡೆಯಲಾಗದು ಎಂದಿದ್ದಾರೆ ಒವೈಸಿ. 

ಮುಸ್ಲಿಂ ಸಮುದಾಯದಲ್ಲಿನ ಸದಸ್ಯರ ಅಳಲು ಕೇಳದೆಯ ತ್ರಿವಳಿ ತಲಾಕ್‌ನ್ನು ಎನ್‌ಡಿಎ ಸರ್ಕಾರ ನಿಷೇಧಿಸಿತ್ತು. ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಏಳಿಗೆಗಾಗಿ ಮೀಸಲಾತಿ ನೀಡಬೇಕು ಎಂದು ಒವೈಸಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿಭಾರತ ನನ್ನಪ್ಪನ ದೇಶ, ಇಲ್ಲಿಂದ ಯಾರೂ ಬಲವಂತವಾಗಿ ಓಡಿಸಬೇಕಾಗಿಲ್ಲ: ಒವೈಸಿ

ಪ್ರತಿಕ್ರಿಯಿಸಿ (+)