ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಮೇಲ್ವಿಚಾರಕರ ಭತ್ಯೆ ಹೆಚ್ಚಳ

Last Updated 24 ಅಕ್ಟೋಬರ್ 2018, 16:47 IST
ಅಕ್ಷರ ಗಾತ್ರ

ನವದೆಹಲಿ: ಆಶಾ ಮೇಲ್ವಿಚಾರಕರ ಪರಿಶೀಲನಾ ಭೇಟಿ ಭತ್ಯೆ ಹೆಚ್ಚಿಸಲಾಗಿದೆ.

ಪ್ರತಿ ಭೇಟಿಗೆ ಈಗಿರುವ ₹250ರಿಂದ ₹300ಕ್ಕೆ ಹೆಚ್ಚಿಸಲು ಕೇಂದ್ರದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಈ ತಿಂಗಳಿಂದಲೇ ಪರಿಷ್ಕೃತ ಭತ್ಯೆ ಜಾರಿಯಾಗಲಿದೆ.

ಈ ಹೆಚ್ಚುವರಿ ಭತ್ಯೆಯಿಂದ ಆಶಾ ಮೇಲ್ವಿಚಾರಕರಿಗೆ ಪ್ರತಿ ತಿಂಗಳು ₹5 ಸಾವಿರ ಬದಲು ₹6 ಸಾವಿರ ದೊರೆಯಲಿದೆ. ಕೇಂದ್ರದ ಈ ನಿರ್ಧಾರದಿಂದ 41,405 ಆಶಾ ಮೇಲ್ವಿಚಾರಕರಿಗೆ ಅನುಕೂಲವಾಗಲಿದೆ.

ಆಶಾ ಮೇಲ್ವಿಚಾರಕರು ಸುಮಾರು 10ರಿಂದ 25 ಆಶಾ ಕಾರ್ಯಕರ್ತರ ಕಾರ್ಯಕ್ಷಮತೆ ಮೇಲೆ ನಿಗಾವಹಿಸುತ್ತಾರೆ. ಆಶಾ ಕಾರ್ಯಕರ್ತರಲ್ಲೇ ಒಬ್ಬರನ್ನು ಆಶಾ ಮೇಲ್ವಿಚಾರಕರನ್ನಾಗಿ ನೇಮಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT