ಹಿಂಸಾಮಾರ್ಗ ಬಿಡಲು ಮಕ್ಕಳಿಗೆ ಹೇಳಿ: ಉಗ್ರರ ಕುಟುಂಬಕ್ಕೆ ಕಾಶ್ಮೀರದ ಡಿಜಿಪಿ ಮನವಿ

7

ಹಿಂಸಾಮಾರ್ಗ ಬಿಡಲು ಮಕ್ಕಳಿಗೆ ಹೇಳಿ: ಉಗ್ರರ ಕುಟುಂಬಕ್ಕೆ ಕಾಶ್ಮೀರದ ಡಿಜಿಪಿ ಮನವಿ

Published:
Updated:
ಎಸ್‌.ಪಿ.ವೇದ್‌

ಶ್ರೀನಗರ: ‘ಹಿಂಸಾ ಮಾರ್ಗವನ್ನು ಬಿಡುವಂತೆ ನಿಮ್ಮ ಪುತ್ರರಿಗೆ ಹೇಳಿ. ಭಯೋತ್ಪಾದನಾ ಸಂಘಟನೆ ತೊರೆದವರನ್ನು ಒಳಗೊಂಡಂತೆ ಎಲ್ಲರಿಗೂ ಪುನರ್ವಸತಿ ಸೇರಿದಂತೆ ಸಾಧ್ಯವಾದ ಎಲ್ಲ ನೆರವನ್ನೂ ನೀಡಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್‌.ಪಿ.ವೇದ್‌ ಅವರು ಉಗ್ರಗಾಮಿ ಸಂಘಟನೆ ಸೇರಿದವರ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದಿರುವ ಅವರು, ‘ತಪ್ಪು ದಾರಿ ತುಳಿದಿರುವ ನಿಮ್ಮ ಮಕ್ಕಳಿಗೆ ಇಂದೇ ಅದರಿಂದ ಹೊರ ಬರುವಂತೆ ತಿಳಿಹೇಳಿ. ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವುದು ನೋವಿನ ಸಂಗತಿ. ಹೀಗಾಗಿ ಹಿಂಸೆಯನ್ನು ಬಿಟ್ಟು ಮುಖ್ಯವಾಹಿನಿಗೆ ಅವರನ್ನು ತನ್ನಿ’ ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !