ಭಾನುವಾರ, ನವೆಂಬರ್ 17, 2019
27 °C

ಅಸ್ಸಾಂ ಎನ್‌ಆರ್‌‌ಸಿ ಕರಡು ಪಟ್ಟಿ: ಮಾಜಿ ರಾಷ್ಟ್ರಪತಿ ಮನೆತನದವರ ಹೆಸರುಗಳೇ ಮಾಯ!

Published:
Updated:
Deccan Herald

ಬೆಂಗಳೂರು: ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿ(ಎನ್‌ಆರ್‌ಸಿ) ಅಂತಿಮ ಕರಡು ಪಟ್ಟಿಯಲ್ಲಿ ಕೈಬಿಡಿಲಾಗಿರುವ 40.07 ಲಕ್ಷ ಜನರಲ್ಲಿ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅಹಮದ್‌ ಅವರ ಮನೆತನದವರೂ ಸೇರಿದ್ದಾರೆ. 

1951ರ ಬಳಿಕ ಇದೇ ಮೊದಲ ಬಾರಿಗೆ ಎನ್‌ಆರ್‌ಸಿ ಪರಿಷ್ಕರಣೆಯಾಗಿದೆ. ಸೋಮವಾರ ಪ್ರಕಟಿಸಲಾಗಿರುವ ಅಸ್ಸಾಂ ಎನ್‌ಆರ್‌ಸಿಯ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಜನರ ಹೆಸರನ್ನು ಪಟ್ಟಿಯಿಂದ ಬಿಡಲಾಗಿದೆ. 1974–1977ರ ವರೆಗೆ ದೇಶದ ಐದನೇ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್‌ ಅಲಿ ಅಹಮದ್‌ ಅವರ ಕುಟುಂಬದವರ ಹೆಸರೇ ಇಲ್ಲದಿರುವುದು ಚರ್ಚೆಗೆ ಗ್ರಾಸವಾಗಿದೆ. 

ಭಾರತದ ಅಧಿಕೃತ ಪೌರತ್ವಕ್ಕಾಗಿ ಸಲ್ಲಿಕೆಯಾಗಿದ್ದ 3.29 ಕೋಟಿ ಜನರ ಅರ್ಜಿಗಳ ಪೈಕಿ ಪರಿಶೀಲನೆಯ ಬಳಿಕ 2.89 ಕೋಟಿ ಜನರನ್ನು ಅಂತಿಮ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. 

ಕುಟುಂಬದವರ ಹೆಸರು ಪಟ್ಟಿಯಲ್ಲಿ ಸೇರಲು ಅಗತ್ಯವಿರುವ ದಾಖಲೆಗಳನ್ನು ಖಾತರಿ ಪಡಿಸಿಕೊಳ್ಳುವುದಾಗಿ ಫಕ್ರುದ್ದೀನ್ ಅಲಿ ಅವರ ಸಹೋದರ ಲೆ.ಇಕ್ರಾಮುದ್ದೀನ್‌ ಅಲಿ ಅಹಮದ್‌ ಅವರ ಪುತ್ರ ಜಿಯಾವುದ್ದೀನ್‌ ಅಲಿ ಅಹಮದ್‌ ಹೇಳಿದ್ದಾರೆ. ಇವರು ಅಸ್ಸಾಂನ ರಂಗಿಯಾ ಮೂಲದವರಾಗಿದ್ದಾರೆ. 

ಇನ್ನಷ್ಟು: 40 ಲಕ್ಷ ಮಂದಿ ಭಾರತೀಯರಲ್ಲ!

ಪ್ರತಿಕ್ರಿಯಿಸಿ (+)