ಸೋಮವಾರ, ಜೂನ್ 1, 2020
27 °C

ಅಸ್ಸಾಂ: ಡ್ರೋನ್ ಕ್ಯಾಮರಾ ಬಳಸಿ ಲಾಕ್ ಡೌನ್ ಉಲ್ಲಂಘಿಸುವವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಸ್ಸಾಂ: ಕೊರೊನಾ ಸೋಂಕು ಹರಡುವಿಕೆ ತಡೆಗೆ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲ ರಾಜ್ಯಗಳಲ್ಲಿ ಜನರು ಗಣನೆಗೆ ತೆಗೆದುಕೊಳ್ಳದೇ ವಾಹನಗಳಲ್ಲಿ ಓಡಾಡುತ್ತಿದ್ದು, ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇದನ್ನು ತಡೆಯಲು ಅಸ್ಸಾಂನ ಗವಾಹಟಿ ಪೊಲೀಸರು ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದುವೇ ಡ್ರೋನ್ ಕ್ಯಾಮರಾ ಬಳಕೆ.
ಲಾಕ್ ಡೌನ್ ಆದೇಶ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲು ಇಲ್ಲಿನ ಪೊಲೀಸರು ಡ್ರೋನ್ ಕ್ಯಾಮರಾಗಳನ್ನು ಉಪಯೋಗಿಸುತ್ತಿದ್ದಾರೆ. ಈ ಕ್ಯಾಮರಾ ಮೂಲಕ ವಾಹನಗಳು ಬೀದಿಗಿಳಿದಿರುವುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುತ್ತಿದ್ದಾರೆ.

ಡ್ರೋನ್ ಕ್ಯಾಮರಾ ಮೂಲಕ ಸುಲಭವಾಗಿ ಎಲ್ಲಾ ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ಪತ್ತೆಹಚ್ಚಬಹುದು. ಅಲ್ಲದೆ, ಆ ವಾಹನ ಎಲ್ಲಿಗೆ ಹೋಗುತ್ತಿದೆ. ರಸ್ತೆ ಯಾವುದು ಎಂಬುದನ್ನು ಕುಳಿತಲ್ಲಿಯೇ ಕ್ಯಾಮರಾ ಸಹಾಯದಿಂದ ನೋಡಬಹುದು. ಆ ನಂತರ ಆ ಪ್ರದೇಶದಲ್ಲಿ ಗಸ್ತು ತಿರುಗುವ ಸಿಬ್ಬಂದಿಗೆ ಸೂಚಿಸಿ ಆರೋಪಿಗಳನ್ನು ಬಂಧಿಸಬಹುದಾಗಿದೆ. 

 

ಅಸ್ಸಾಂ ಪೊಲೀಸರು ಇದೇ ಮಾರ್ಗ ಅನುಸರಿಸಿ ಈಗ 75 ಮಂದಿಯನ್ನು ಬಂಧಿಸಿದ್ದು, 2000 ವಾಹನಗಳನ್ನು ಜಪ್ತಿಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು