72 ಸಾವಿರ ಬಂದೂಕು ಖರೀದಿ: ಅಮೆರಿಕದೊಂದಿಗೆ ಒಪ್ಪಂದ

7

72 ಸಾವಿರ ಬಂದೂಕು ಖರೀದಿ: ಅಮೆರಿಕದೊಂದಿಗೆ ಒಪ್ಪಂದ

Published:
Updated:
Prajavani

ನವದೆಹಲಿ: ಸೇನೆಗಾಗಿ 72,400 ಬಂದೂಕುಗಳ (ಅಸಾಲ್ಟ್‌ ರೈಫಲ್ಸ್‌) ಖರೀದಿಗಾಗಿ ಕೇಂದ್ರ ಸರ್ಕಾರ, ಅಮೆರಿಕದ ‘ಸಿಗ್‌ ಸಾವರ್’ ಕಂಪನಿಯೊಂದಿಗೆ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದೆ.

‘ತ್ವರಿತ ಗತಿ ಖರೀದಿ ಪ್ರಕ್ರಿಯೆ’ ಯಡಿ ₹ 700 ಕೋಟಿ ವೆಚ್ಚದಲ್ಲಿ ಈ ಬಂದೂಕುಗಳನ್ನು ಖರೀದಿ ಮಾಡಲಾಗುತ್ತಿದೆ. ಒಂದು ವರ್ಷದ ಒಳಗಾಗಿ ಕಂಪನಿ ಈ ಬಂದೂಕುಗಳನ್ನು ಪೂರೈಕೆ ಮಾಡಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವತಃ ಅಮೆರಿಕ ಅಲ್ಲದೇ, ಯುರೋಪ್‌ನ ಅನೇಕ ರಾಷ್ಟ್ರಗಳ ಭದ್ರತಾ ಪಡೆಗಳು ಈ ಬಂದೂಕುಗಳನ್ನು ಬಳಕೆ ಮಾಡುತ್ತಿವೆ.

ಸದ್ಯ, ಸೇನಾಪಡೆಗಳು ಐಎನ್‌ಎಸ್‌ಎಎಸ್‌ ಬಂದೂಕುಗಳನ್ನು ಬಳಸುತ್ತಿವೆ. ಈಗಿನ ಅಗತ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಗಡಿಭಾಗದಲ್ಲಿನ ಪರಿಸ್ಥಿತಿಯಲ್ಲಿ ಸುಲಭ ಬಳಕೆ ಹಾಗೂ ನಿರ್ವಹಣೆ ಸಾಧ್ಯವಿರುವ ‘ಸಿಗ್‌ ಸಾವರ್’ ಕಂಪನಿ ತಯಾರಿಸುವ ಬಂದೂಕುಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !