ಮಧ್ಯಾಹ್ನ 3 ಗಂಟೆಗೆ ರಾಜಸ್ಥಾನದಲ್ಲಿ ಶೇ 60, ತೆಲಂಗಾಣದಲ್ಲಿ ಶೇ 48 ರಷ್ಟು ಮತದಾನ

7

ಮಧ್ಯಾಹ್ನ 3 ಗಂಟೆಗೆ ರಾಜಸ್ಥಾನದಲ್ಲಿ ಶೇ 60, ತೆಲಂಗಾಣದಲ್ಲಿ ಶೇ 48 ರಷ್ಟು ಮತದಾನ

Published:
Updated:

ಹೈದರಾಬಾದ್‌/ ಜೈಪುರ: ರಾಜಸ್ಥಾನದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 60 ರಷ್ಟು ಹಾಗೂ ತೆಲಂಗಾಣದಲ್ಲಿ ಮಧ್ಯಾಹ್ನ 2.30ರ ವೇಳೆಗೆ ಶೇ 48 ರಷ್ಟು ಮತದಾನವಾಗಿದೆ ಚುನಾವಣಾ ಆಯೋಗ ತಿಳಿಸಿದೆ.

ಉಭಯ ರಾಜ್ಯಗಳಲ್ಲೂ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ದೋಷ ಕಂಡುಬಂದಿತ್ತು. ನಂತರ ಅಧಿಕಾರಿಗಳು ಮಂತ್ರವನ್ನು ಸರಿಪಡಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಗಲಾಟೆಗಳನ್ನು ಹೊರತು ಪಡಿಸಿದರೆ ಮತದಾನ ಶಾಂತಿಯುತವಾಘಿ ನಡೆಯುತ್ತಿದೆ. ಎರಡು ರಾಜ್ಯಗಳಲ್ಲೂ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಅರೆ ಸೇನಾಪಡೆಗಳನ್ನು ಭದ್ರತೆಗೆ ನೀಯೋಜಿಸಲಾಗಿದೆ. 

199 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ರಾಜಸ್ಥಾನದಲ್ಲಿ 4.74 ಕೋಟಿ ಜನರು ಮತದಾನ ಮಾಡಲಿದ್ದಾರೆ. ಇಲ್ಲಿ ಕೆಲವು ಕ್ಷೇತ್ರಗಳಲ್ಲಿ ಸಂಜೆ 5 ಹಾಗೂ 6 ಗಂಟೆಗೆ ಮತದಾನ ಮುಗಿಯಲಿದೆ.  ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲದ ಹೋರಾಟ ಮಾಡುತ್ತಿವೆ. ಈ ಸಲ ಬಿಎಸ್‌ಪಿ ಕೂಡ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ತೆಲಂಗಾಣದಲ್ಲಿ  1,41,56,182 ಪುರುಷರು ಹಾಗೂ 1,39,05,811 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,80,64,864 ಹೆಸರುಗಳು ಮತಪಟ್ಟಿಯಲ್ಲಿವೆ. ಮತದಾನಕ್ಕಾಗಿ 44,415 ಸಾಮಾನ್ಯ ಘಟಕ, 7,557 ಮೀಸಲು ಘಟಕಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. 32,016 ನಿಯಂತ್ರಕ ಘಟಕ, 4,432 ಮೀಸಲು ನಿಯಂತ್ರಕ ಘಟಕಗಳನ್ನು ತೆರೆಯಲಾಗಿದ್ದು, ಒಟ್ಟು 37,277 ವಿವಿಪ್ಯಾಟ್‌ (ವಿವಿಪಿಎಟಿ- ವೋಟರ್ ವೈರಿಫೈಡ್ ಪೇಪರ್ ಆಡಿಟ್ ಟ್ರೈಲ್)ಗಳನ್ನು ಅಳವಡಿಸಲಾಗಿದೆ.

ಈ ಬಾರಿ ಚುನಾವಣೆಯಲ್ಲಿ ಟಿಆರ್‌ಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌, ತೆಲುಗು ದೇಶಂ ಪಕ್ಷ(ಟಿಡಿಪಿ) ಮೈತ್ರಿ ಕೂಟಗಳ ನಡುವೆ ತೀವ್ರ ಸ್ಪರ್ಧೆ ಏರ್ಪಡಲಿದೆ. ತೆಲಂಗಾಣ ಜನ ಸಮಿತಿ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷಗಳೂ ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ರಾಜ್ಯವು ತ್ರಿಪಕ್ಷೀಯ ಹೋರಾಟಕ್ಕೆ ಸಾಕ್ಷಿಯಾಗಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !