ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪನ್ ಚಂಡಮಾರುತ: 1.9 ಕೋಟಿ ಮಕ್ಕಳು ಅಪಾಯದಲ್ಲಿ

Last Updated 21 ಮೇ 2020, 13:57 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ದೊಡ್ಡ ವಿಪತ್ತು ಸೃಷ್ಟಿಸಿರುವ ಅಂಪನ್ ಚಂಡಮಾರುತದ ಪರಿಣಾಮ ಭಾರತದ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಸುಮಾರು 1.9 ಕೋಟಿ ಮಕ್ಕಳು ಅಪಾಯದಲ್ಲಿದ್ದಾರೆ ಎಂದು ಯುನಿಸೆಫ್‌(ವಿಶ್ವ ಸಂಸ್ಥೆಯ ಮಕ್ಕಳ ನಿಧಿ) ಗುರುವಾರ ತಿಳಿಸಿದೆ.

ಅಂಪನ್ ಚಂಡಮಾರುತದ ಪರಿಣಾಮವಾಗಿ ಉಂಟಾಗುವ ಭೂ ಕುಸಿತ, ಪ್ರವಾಹ ಹಾಗೂ ಭಾರಿ ಮಳೆಯಿಂದಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಯುನಿಸೆಫ್‌ ಹೇಳಿದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಚಂಡಮಾರುತಕ್ಕೆ ತುತ್ತಾಗಿರುವ ಜಿಲ್ಲೆಗಳ ಜಿಲ್ಲಾ ಆರೋಗ್ಯಾಧಿಕಾರಿಗಳ ಸಂಪರ್ಕದಲ್ಲಿ ಇದ್ದು ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದೆ. 1.6 ಕೋಟಿ ಮಕ್ಕಳು ಸೇರಿದಂತೆ ಸುಮಾರು 5 ಕೋಟಿ ಜನರಿಗೆಚಂಡಮಾರುತದಿಂದ ತೊಂದರೆಯಾಗಲಿದೆ ಎಂದು ಯುನಿಸೆಫ್‌ ಹೇಳಿದೆ.

ನಾವು ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಿದ್ದೇವೆ. ಚಂಡಮಾರುತ ತೀವ್ರ ಪರಿಣಾಮ ಉಂಟುಮಾಡುವ ಪ್ರದೇಶಗಳಲ್ಲಿನ ಮಕ್ಕಳುಮತ್ತು ಅವರ ಕುಟುಂಬಗಳ ಸುರಕ್ಷತೆಗಾಗಿ ಕಾರ್ಯಪಡೆಗಳನ್ನು ರಚಿಸಿದ್ದೇವೆ. ವಿಪತ್ತು ನಿರ್ವಹಣಾ ಪಡೆ, ಆರೋಗ್ಯ ಅಧಿಕಾರಿಗಳೊಂದಿಗೂ ನಾವು ಸಂಪರ್ಕದಲ್ಲಿಇದ್ದೇವೆ ಎಂದು ಯುನಿಸೆಫ್ ದಕ್ಷಿಣ ಏಷ್ಯಾದ ಪ್ರಾದೇಶಿಕ ನಿರ್ದೇಶಕರಾದ ಜೀನ್ ಗೌಫ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT