ದರ್ಶನಕ್ಕಾಗಿ ಸಾವಿರಾರು ಮಂದಿ...

7

ದರ್ಶನಕ್ಕಾಗಿ ಸಾವಿರಾರು ಮಂದಿ...

Published:
Updated:

ನವದೆಹಲಿ: ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಲು ದೇಶದ ಉದ್ದಗಲದಿಂದ ಜನ ದೆಹಲಿಗೆ ತಲುಪಿದ್ದರು. ಉತ್ತರ ಪ್ರದೇಶದ ಯುವಕನೊಬ್ಬ ಸ್ಕೂಟರ್‌ನಲ್ಲಿ ದೆಹಲಿ ತಲುಪಿದ್ದರು. ಸಾವಿರಾರು ಮಂದಿ ರೈಲು, ವಿಮಾನ, ಬಸ್‌ಗಳ ಮೂಲಕ ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳಲು ಬಂದಿದ್ದರು.

ಒಬ್ಬರಿಗೊಬ್ಬರು ಪರಿಚಯವೇ ಇಲ್ಲದ ಸಾವಿರಾರು ಜನರನ್ನು ವಾಜಪೇಯಿ ಎಂಬ ಚುಂಬಕ ಶಕ್ತಿಯೇ ಒಟ್ಟಾಗಿಸಿತು.

ಎಲ್ಲೆಲ್ಲೂ ಅಟಲ್‌: ರಾಷ್ಟ್ರ ರಾಜಧಾನಿಯಲ್ಲಿ ಎಲ್ಲಿ ನೋಡಿದರಲ್ಲಿ ವಾಜಪೇಯಿ ಅವರಿಗೆ ಗೌರವ ಸಮರ್ಪಿಸುವ ಬ್ಯಾನರ್‌, ಪೋಸ್ಟರ್‌ಗಳೇ ತುಂಬಿ ಹೋಗಿದ್ದವು. ಬಿಜೆಪಿ ಕಚೇರಿಯ ಮುಂದೆ ಬೃಹತ್‌ ಗಾತ್ರದ ಪೋಸ್ಟರ್‌ ಅಳವಡಿಸಲಾಗಿತ್ತು. 

**

ವಿದೇಶಿ ನಾಯಕರ ಪ್ರತಿಕ್ರಿಯೆಗಳು

ಭಾರತ–ರಷ್ಯಾಗಳ ದ್ವಿಪಕ್ಷೀಯ ಸಹಕಾರ ಮತ್ತು ಸ್ನೇಹ ಸಂಬಂಧದ ವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ರಾಜಕೀಯ ನಾಯಕನನ್ನಾಗಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನಾವು ನೆನಪಿಸಿಕೊಳ್ಳುತ್ತೇವೆ.

-ವ್ಲಾಡಿಮಿರ್ ಪುಟಿನ್, ರಷ್ಯಾ ಅಧ್ಯಕ್ಷ

**

ನೇಪಾಳ–ಭಾರತದ ಸಂಬಂಧ ಗಟ್ಟಿಗೊಳ್ಳುವಲ್ಲಿ ವಾಜಪೇಯಿ ಅವರ ಕೊಡುಗೆ ಬಹಳಷ್ಟಿದೆ. ಕೇವಲ ಭಾರತ ಮಾತ್ರವಲ್ಲ, ನೇಪಾಳವೂ ಈಗ ತನ್ನ ನಿಜವಾದ ಸ್ನೇಹಿತ ಮತ್ತು ಹಿತೈಷಿಯನ್ನು ಕಳೆದುಕೊಂಡಿದೆ.

-ಕೆ.ಪಿ.ಶರ್ಮಾ.ಒಲಿ, ನೇಪಾಳ ಪ್ರಧಾನಿ

**

ನಮ್ಮ ದ್ವೀಪ ರಾಷ್ಟ್ರದಲ್ಲಿ ಈಗ ಶಾಂತಿ ಮತ್ತು ಸ್ಥಿರತೆ ನೆಲೆಸಿದೆ. ಅದಕ್ಕೆ ಕಾರಣಕರ್ತರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಹ ಒಬ್ಬರು. ಅವರ ಅಗಲಿಕೆಯಿಂದ ನೋವಾಗಿದೆ. ಅವರಿಗೆ ಚಿರಶಾಂತಿ ಸಿಗಲಿ

-ಮೈತ್ರಿಪಾಲ ಸಿರಿಸೇನಾ, ಶ್ರೀಲಂಕಾ ಅಧ್ಯಕ್ಷ

**

ಭಾರತ–ಪಾಕಿಸ್ತಾನಗಳ ನಡುವಣ ಸಂಬಂಧದಲ್ಲಿ ಬದಲಾವಣೆ ತಂದದ್ದರಲ್ಲಿ ವಾಜಪೇಯಿ ಅವರ ಕೊಡುಗೆ ಮಹತ್ವದ್ದು. ಅಭಿವೃದ್ಧಿಗಾಗಿ ಪ್ರಾದೇಶಿಕ ಸಹಕಾರವನ್ನು ಬೆಂಬಲಿಸುತ್ತಿದ್ದ ಮಹಾನ್ ನಾಯಕ ಅವರು.

-ಇಮ್ರಾನ್ ಖಾನ್, ಪಾಕಿಸ್ತಾನದ ನಿಯೋಜಿತ ಪ್ರಧಾನಿ

*

ವಾಜಪೇಯಿ ಅವರ ದೂರದೃಷ್ಟಿಯಿಂದಲೇ ಅಮೆರಿಕ–ಭಾರತದ ಮಧ್ಯೆ ಇಂದು ದ್ವಿಪಕ್ಷೀಯ ಸಂಬಂಧ ವೃದ್ಧಿಸಿದೆ. ಆ ಮಹಾನ್ ನಾಯಕನಿಂದಲೇ ಎರಡೂ ದೇಶಗಳು ಇಂದಿಗೂ ದ್ವಿಪಕ್ಷೀಯ ಸಹಕಾರದ ಲಾಭ ಪಡೆಯುತ್ತಿವೆ.

-ಮೈಕಲ್ ಪಾಂಪಿಯೊ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !