ಮರೆಯಾದ ’ಕವಿ ಹೃದಯದ ರಾಜಕಾರಣಿ’ ಅಟಲ್‌ ಬಿಹಾರಿ ವಾಜಪೇಯಿ

7

ಮರೆಯಾದ ’ಕವಿ ಹೃದಯದ ರಾಜಕಾರಣಿ’ ಅಟಲ್‌ ಬಿಹಾರಿ ವಾಜಪೇಯಿ

Published:
Updated:

ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಇಲ್ಲಿನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಆಸ್ಪತ್ರೆಯಲ್ಲಿ ಗುರುವಾರ ಸಂಜೆ 5:05ಕ್ಕೆ ನಿಧನರಾದರು.

ಹಲವು ವರ್ಷಗಳಿಂದ ಉಸಿರಾಟ ತೊಂದರೆ ಮತ್ತು ಮೂತ್ರ ಪಿಂಡ ಸೋಕಿನಿಂದ ಅವರು ಬಳಲುತ್ತಿದ್ದರು. ಜೂನ್‌ 11 ರಂದು ಏಮ್ಸ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಡಾ.ರಣದೀಪ್‌ ಗುಲೇರಿಯಾ ನೇತೃತ್ವದ ವೈದ್ಯರ ತಂಡ ವಾಜಪೇಯಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು.

(ಏಮ್ಸ್‌ ಆಸ್ಪತ್ರೆ ಅಧಿಕೃತ ಪ್ರಕಟಣೆ)

ಆಗಸ್ಟ್‌ 15ರಂದು ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯ ಉಂಟಾಗಿ ಕೃತಕ ಉಸಿರಾಟ ವ್ಯವಸ್ಥೆ ನೀಡಲಾಯಿತು. ಏಮ್ಸ್‌ ವೈದ್ಯ ಡಾ.ಆರತಿ ವಿಜ್‌ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದರು. ಡಯಾಬಿಟಿಸ್‌ನಿಂದಲೂ ಬಳಲುತ್ತಿದ್ದ ವಾಜಪೇಯಿ ಅವರ ಒಂದು ಮೂತ್ರಪಿಂಡ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. 2009ರಲ್ಲಿ ಪಾರ್ಶ್ವವಾಯುಗೆ ಒಳಗಾದ ಬಳಿಕ ಮರೆಗುಳಿ ಮತ್ತು ಮಧುಮೇಹದಿಂದ ಹಾಸಿಗೆ ಹಿಡಿದರು. 

ವಾಜಪೇಯಿ ಅವರು 1996, 1996–1999 ಹಾಗೂ 1999–2004ರಲ್ಲಿ ಒಟ್ಟು ಮೂರು ಬಾರಿ ಪ್ರಧಾನಿಯಾಗಿದ್ದರು. ಕಾಂಗ್ರೇಸೇತರ ಅಭ್ಯರ್ಥಿಯೊಬ್ಬ ಪ್ರಧಾನಿಯಾಗಿ ದೀರ್ಘಾವಧಿ ಕಾರ್ಯನಿರ್ಹಿಸಿದ ಖ್ಯಾತಿಯೂ ಇವರದ್ದು. ಆರೋಗ್ಯದಲ್ಲಿ ಏರು–ಪೇರಾಗುತ್ತಿದ್ಧಂತೆ ಸಾರ್ವಜನಿಕ ರಾಜಕೀಯ ಜೀವನದಿಂದ ನಿಧಾನವಾಗಿ ಹಿಂದೆ ಸರಿದರು ಹಾಗೂ ನಿವಾಸದಲ್ಲಿಯೇ ಬಹು ಸಮಯವನ್ನು ಕಳೆದರು. 

ಡಿಸೆಂಬರ್‌ 25, 1924: ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ದಂಪತಿ ಮಗನಾಗಿ ಮಧ್ಯಪ್ರದೇಶದ ಗ್ವಾಲಿಯರ್ ಸಮೀಪದ 'ಶಿಂದೆ ಕಿ ಚವ್ವಾಣಿ' ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಶಾಲಾ ಶಿಕ್ಷಕ ಮತ್ತು ಕವಿಯಾಗಿದ್ದರು. ಅವರದು ಮಧ್ಯಮ ವರ್ಗದ ಕುಟುಂಬ.

ವಿದ್ಯಾರ್ಹತೆ: ಬಾಲ್ಯದ ಶಿಕ್ಷಣ ಸರಸ್ವತಿ ಶಿಶು ಮಂದಿರದಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ವಿಕ್ಟೋರಿಯಾ ಕಾಲೇಜಿನಲ್ಲಿ ಪಡೆದುಕೊಂಡರು. ಪದವಿ ಶಿಕ್ಷಣದಲ್ಲಿ ಹಿಂದಿ, ಇಂಗ್ಲಿಷ್‌ ಹಾಗೂ ಸಂಸ್ಕೃತದಲ್ಲಿ ಅವರು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದರು.

ಇನ್ನಷ್ಟು: 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 4

  Sad
 • 1

  Frustrated
 • 0

  Angry

Comments:

0 comments

Write the first review for this !