ಭಾರತ ಮಹಾನ್‌ ನಾಯಕ, ಪುತ್ರನನ್ನು ಕಳೆದುಕೊಂಡಿದೆ: ಕಾಂಗ್ರೆಸ್‌

7

ಭಾರತ ಮಹಾನ್‌ ನಾಯಕ, ಪುತ್ರನನ್ನು ಕಳೆದುಕೊಂಡಿದೆ: ಕಾಂಗ್ರೆಸ್‌

Published:
Updated:

ನವದೆಹಲಿ: ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ ಹಾಗೂ ಪಕ್ಷಪಾತವಿಲ್ಲದೆ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸರ್ವ ಪಕ್ಷದವರಿಂದ ಬಣ್ಣನೆ, ಗುಣಗಾನಕ್ಕೆ ಪಾತ್ರರಾಗಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಕಾಂಗ್ರೆಸ್‌ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಆಧುನಿಕ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರು: ಮನಮೋಹನ ಸಿಂಗ್‌
ತಮ್ಮ ಜೀವಿತಾವಧಿಯನ್ನೇ ದೇಶಕ್ಕಾಗಿ ಮೀಸಲಿಟ್ಟ ಅಟಲ್‌ ಬಿಹಾರಿ ವಾಜಪೇಯಿ ಅವರು ಆಧುನಿಕ ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರು ಬಣ್ಣಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮನಮೋಹನ ಸಿಂಗ್‌ ಅವರು, ವಾಜಪೇಯಿ ಅವರು ಪ್ರಧಾನಿಯಾಗಿ ಮತ್ತು ಅತ್ಯುತ್ತಮ ಸಂಸದೀಯಪಟುವಾಗಿದ್ದರು ಅತ್ಯುತ್ತಮ ಭಾಷಣಕಾರ ಮತ್ತು ಪ್ರಭಾವಿ ಕವಿಯೂ ಆಗಿದ್ದರು ಎಂದು ಸ್ಮರಿಸಿದ್ದಾರೆ.

‘ಭಾರತ ರತ್ನ‘ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇವೆ. ಉತ್ತಮ ವಾಗ್ಮಿ, ಪ್ರಭಾವಿ ಕವಿ, ಅಸಾಧಾರಣ ಸಾರ್ವಜನಿಕ ಸೇವಕ, ಅತ್ಯುತ್ತಮ ಸಂಸತ್‌ಪಟು ಮತ್ತು ಪ್ರಧಾನಿಯಾಗಿ, ಆಧುನಿಕ ಭಾರತದ ಶ್ರೇಷ್ಠ ನಾಯಕರ ಸಾಲಿನಲ್ಲಿ ನಿಂತು ದೇಶಕ್ಕಾಗಿ ಜೀವನನ್ನೇ ಸವೆಸಿದ ವ್ಯಕ್ತಿ ಅವರು. ಅವರು ದೇಶಕ್ಕೆ ನೀಡಿದ ಸೇವೆಯನ್ನು ದೀರ್ಘಕಾಲದವರೆಗೆ ನೆನಪಿನಲ್ಲುಳಿಯುತ್ತವೆ‘ ಎಂದು ಮನಮೋಹನ ಸಿಂಗ್ ಅವರು ಗುಣಗಾನ ಮಾಡಿದ್ದಾರೆ.

ಭಾರತ ಮಹಾನ್‌ ಪುತ್ರನನ್ನು ಕಳೆದುಕೊಂಡಿದೆ: ರಾಹುಲ್‌ ಗಾಂಧಿ

’ಇಂದು ಭಾರತವು ಮಹಾನ್‌ ಪುತ್ರನನ್ನು ಕಳೆದುಕೊಂಡಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಲಕ್ಷಾಂತರ ಜನರ ಪ್ರೀತಿ, ಗೌರಕ್ಕೆ ಪಾತ್ರರಾಗಿದ್ದರು. ಅವರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಕುಟುಂಬ ಮತ್ತು ಅಭಿಮಾನಿಗಳು ಸೇರಿದಂತೆ ಎಲ್ಲರೂ ಅವರನ್ನು ಕಳೆದುಕೊಂಡಿದ್ದಾರೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಂತಾಪ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಅವರು ಏಮ್ಸ್‌ಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.

ಮಹಾನ್‌ ನಾಯಕ: ಕಾಂಗ್ರೆಸ್‌
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಹಾನ್‌ ನಾಯಕರಾಗಿದ್ದರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ನಾವು ಅವರ ನಿಧನಕ್ಕೆ ದುಃಖಿಸುತ್ತೇವೆ ಮತ್ತು ಅವರ ಕುಟುಂಬದೊಟ್ಟಿಗೆ ಭಾವನಾತ್ಮಕವಾಗಿದ್ದು, ಅವರಿಗಾಗಿ ಪ್ರಾರ್ಥಿಸುತ್ತೇವೆ ಎಂದು ಕಾಂಗ್ರೆಸ್‌ ಟ್ವಿಟ್‌ ಮಾಡಿದೆ.

ಅಜಾತಶತ್ರು ಬಣ್ಣನೆಯ ನಾಯಕನ ಮರೆ ದುಃಖದ ಸಂಗತಿ: ಕೆಪಿಸಿಸಿ

 ಭಾರತೀಯ ರಾಜಕಾರಣದ ಪ್ರಬುದ್ಧತೆ ಮತ್ತು ಮುತ್ಸದ್ದಿತನದ ಘನ ಪರಂಪರೆಯ ಅಟಲ್ ಬಿಹಾರಿ ವಾಜಪೇಯಿ ರವರ ಅಂತ್ಯದೊಂದಿಗೆ ಅಜಾತಶತ್ರು ವೆಂಬ ಬಣ್ಣನೆಗೊಳಗಾದ ನಾಯಕ ಮರೆಯಾಗಿರುವುದು ದುಃಖದ ಸಂಗತಿ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವಿಟ್‌ ಮಾಡಿದೆ.

ವಿಶಾಲ ಹೃದಯದ ರಾಜಕೀಯ ಮತ್ಸದ್ಧಿ: ದಿನೇಶ್‌ ಗುಂಡೂರಾವ್
ಅಟಲ್‌ ಬಿಹಾರಿ ವಾಜಪೇಯಿ ಅವರು, ಭಾರತ ದೇಶ ನೋಡಿರುವ ಒಬ್ಬ ಅತ್ಯಂತ್ಯ ಗೌರವಾನ್ವಿತ, ಪ್ರೀತಿಯ, ವಿಶಾಲ ಹೃದಯದ ರಾಜಕೀಯ ಮುತ್ಸದ್ದಿ. ಧೀಮಂತ ವ್ಯಕ್ತಿತ್ವ ಮತ್ತು ಪ್ರಭುದ್ದ ವಾಗ್ಮಿ, ಅವರ ಅಗಲಿಕೆಗೆ ನನ್ನ ಮನಸ್ಪೂರ್ತಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ತೀವ್ರ ನೋವುಂಟು ಮಾಡಿದೆ: ಡಿಸಿಎಂ
ಅತ್ಯಂತ ಗೌರವಾನ್ವಿತ ಮತ್ತು ಕ್ರಿಯಾಶೀಲ ನಾಯರೊಬ್ಬರು ಇನ್ನಿಲ್ಲವಾದರು ಎಂಬುದು ತೀವ್ರವಾಗಿ ನೋವುಂಟು ಮಾಡಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರು ಭಾರತೀಯ ರಾಜಕಾರಣದಲ್ಲಿ ಅನುಪಮ ವ್ಯಕ್ತಿತ್ವದವರು. ಅವರ ವರ್ಚಸ್ಸು ಶಾಶ್ವತವಾಗಿರುತ್ತದೆ. ಅವರಿಗೆ ನಮ್ಮ ಸಂತಾಪಗಳು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಸ್ಮರಿಸಿದ್ದಾರೆ. 

ವಿನಮ್ರ ರಾಜನೀತಿಯಂತಿದ್ದರು: ಸಿದ್ದರಾಮಯ್ಯ
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ನಾನು ಧುಃಖಿತನಾಗಿದ್ದೇನೆ. ಅವರು ಗೌರವಾನ್ವಿತ ಮತ್ತು ವಿನಮ್ರ ರಾಜನೀತಿಯಂತಿದ್ದರು. ಅವರ ಸೇವೆ ಸದಾಕಾಲ ಸ್ಮರರಣೀಯ. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ದುಃಖವನ್ನು ನೀಗುವ ಶಕ್ತಿ ಲಭಿಸಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮರಿಸಿದ್ದಾರೆ.

* ಇದವನ್ನೂ ಓದಿ...
ಮರೆಯಾದ ಛಲವಾದಿ, ಕವಿ ಅಟಲ್‌ ಬಿಹಾರಿ ವಾಜಪೇಯಿ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ​

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !