ಅಜಾತಶತ್ರು ಅಸ್ತಂಗತ

7

ಅಜಾತಶತ್ರು ಅಸ್ತಂಗತ

Published:
Updated:
Deccan Herald

ಪಾಕಿಸ್ತಾನದ ಸಂಚಿಗೆ ತಕ್ಕ ಪ್ರತ್ಯುತ್ತರ ನೀಡಿದ ವಾಜಪೇಯಿ, ಅಗತ್ಯ ಬಿದ್ದರೆ ಗಡಿ ರೇಖೆಯನ್ನು ದಾಟಿ ಶತ್ರು ದೇಶದ ಮೇಲೆ ಅಣ್ವಸ್ತ್ರ ಪ್ರಯೋಗಕ್ಕೂ ಸಿದ್ಧವಾಗಿದ್ದರು ಎಂಬ ವಾಸ್ತವ ಆನಂತರದ ವರ್ಷಗಳಲ್ಲಿ ಬೆಳಕಿಗೆ ಬಂದಿತು. ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವು ವಾಜಪೇಯಿ ಅವರ ವರ್ಚಸ್ಸು ಹೆಚ್ಚಿಸಲು ನೆರವಾಯಿತು.

ಯುದ್ಧ ಕಾಲ ಮತ್ತು ಶಾಂತಿಕಾಲ ಎರಡರಲ್ಲೂ ನೆಚ್ಚಬಹುದಾದ ನಾಯಕ ವಾಜಪೇಯಿ, ಕಾರ್ಗಿಲ್ ವಿಜಯದ ತಲೆಯಾಳು ಎಂಬ ಸಂದೇಶವನ್ನು ಬಿಜೆಪಿ ಜನಸಮೂಹಗಳತ್ತ ಒಯ್ಯಿತು. ಕಾರ್ಗಿಲ್ ಯುದ್ಧವನ್ನು ಬಡಿದೆಬ್ಬಿಸಿದ್ದ ಇದೇ ಮುಷರ್ರಫ್ ಅವರನ್ನು ವಾಜಪೇಯಿ 2001ರ ಜುಲೈ ತಿಂಗಳಿನಲ್ಲಿ ಆಗ್ರಾ ಶೃಂಗಸಭೆಗೆ ಆಹ್ವಾನಿಸಿದ್ದರು. ಈ ಸಭೆ ಸಫಲವಾಗಲಿಲ್ಲ.

‘ಗೆಳೆಯರನ್ನು ಬದಲಿಸಬಹುದು, ನೆರೆಹೊರೆಯವರನ್ನಲ್ಲ’ ಎನ್ನುತ್ತಿದ್ದ ವಾಜಪೇಯಿ ಅವರ ಸತತ ಶಾಂತಿ ಯತ್ನ ಫಲಿಸಲಿಲ್ಲ. ಆದರೆ ಅದೇ ವರ್ಷದ (1999) ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳು ಇಂಡಿಯನ್ ಏರ್ ಲೈನ್ಸ್ ನ ವಿಮಾನವನ್ನು ಅಪಹರಿಸಿ ಅಫ್ಘಾನಿಸ್ತಾನದ ಕಂದಹಾರಕ್ಕೆ ಒಯ್ದರು.

ಒತ್ತೆಯಾಳುಗಳಾಗಿದ್ದ ಭಾರತೀಯ ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ ಜೈಶ್-ಏ-ಮೊಹಮ್ಮದ್ ಎಂಬ ಉಗ್ರವಾದಿ ಸಂಘಟನೆಯ ಮೌಲಾನಾ ಮಸೂದ್ ಅಜಹರ್ ಸೇರಿದಂತೆ ಮೂವರು ಕುಖ್ಯಾತ ಭಯೋತ್ಪಾದಕರನ್ನು ವಾಜಪೇಯಿ ಸರ್ಕಾರ ಬಿಡುಗಡೆ ಮಾಡಿದ ಕಳಂಕ ಹೊತ್ತಿತು.

ಎರಡು ವರ್ಷಗಳ ನಂತರ 2001ರ ಅಂತ್ಯದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ಭಾರತದ ಸಂಸತ್ ಭವನದೊಳಕ್ಕೆ ನುಗ್ಗಿ ನಡೆಸಿದ ಹೇಯ ದಾಳಿ ನಡೆದದ್ದೂ ವಾಜಪೇಯಿ ಆಡಳಿತದಲ್ಲಿಯೇ.

ಪಾಕ್ ವಿರುದ್ಧ ಗಡಿ ಭಾಗದಲ್ಲಿ ಐದು ಲಕ್ಷ ಯೋಧರನ್ನು ರಣಾಂಗಣಕ್ಕೆ ಭಾರತ ಇಳಿಸಿತ್ತು. ಎರಡೂ ದೇಶಗಳ ನಡುವೆ ಇನ್ನೇನು ಪೂರ್ಣಪ್ರಮಾಣದ ಯುದ್ಧ ನಡೆಯಲಿದೆ ಎಂಬ ತೀವ್ರ ಬಿಗುವು ಉಂಟಾಗಿತ್ತು.

ವಾಜಪೇಯಿ ಅವರನ್ನು ವಿಕಾಸಪುರುಷನೆಂದೂ ಅವರ ಗೆಳೆಯ-ಸಹೋದ್ಯೋಗಿ ಅಡ್ವಾಣಿ ಅವರನ್ನು ಲೋಹಪುರುಷನೆಂದೂ ಅಂದಿನ ದಿನಗಳಲ್ಲಿ ಬಣ್ಣಿಸಲಾಗುತ್ತಿತ್ತು. ಟಾಯರ್ಡ್..ನಾಟ್ ರಿಟೈರ್ಡ್...ವಿಜಯ ಕೀ ಓರ್ ಪ್ರಸ್ಥಾನ್ (ದಣಿವಾಗಿದೆ ಹೌದು, ಅದರ ಅರ್ಥ ನಿವೃತ್ತಿಯ ವಿಶ್ರಾಂತಿ ಬೇಕಿದೆ ಎಂದು ಅಲ್ಲ. ವಿಜಯದೆಡೆಗೆ ಪ್ರಸ್ಥಾನ) ಎಂದು 2004ರ ಲೋಕಸಭಾ ಚುನಾವಣೆಗೆ ಮುನ್ನ ಸಾರಿದ್ದರು ವಾಜಪೇಯಿ. ಚುನಾವಣೆಯಲ್ಲಿ ಪಕ್ಷ ಸೋಲುತ್ತದೆಂದು ಅವರು ನಂಬಿರಲಿಲ್ಲ.

'ಭಾರತ ಬೆಳಗುತ್ತಿದೆ' ಎಂಬ ಬೃಹತ್ ಪ್ರಚಾರಾಂದೋಲನದ ಭುಗಿಲೆಬ್ಬಿಸಿತ್ತು ಬಿಜೆಪಿ. ಅಭಿವೃದ್ಧಿಯೇ ತಮ್ಮನ್ನು ದಡ ಸೇರಿಸುತ್ತದೆ ಎಂದು ಅವರ ಸರ್ಕಾರ ನಂಬಿತ್ತು. ಈ ಹಿನ್ನೆಲೆಯಲ್ಲಿ 2004ರ ಲೋಕಸಭಾ ಚುನಾವಣೆಗಳಲ್ಲಿ ಹಿಂದೂ- ಮುಸ್ಲಿಂ ವಿಷಯ ಎತ್ತಲಿಲ್ಲ. ವಾಜಪೇಯಿ, ಆಡ್ವಾಣಿ ಹಾಗೂ ಪ್ರಮೋದ್ ಮಹಾಜನ್ ಮೂವರೂ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದರು. ಆದರೆ ಚುನಾವಣೆಯ ಸೋಲು 'ಪಾಠ' ಕಲಿಸಿತು. ಆ ನಂತರವೇ ಹಿಂದೂ ಅಸ್ಮಿತೆ ಚುನಾವಣೆಗಳಲ್ಲಿ ಗೆಲ್ಲಲು ಬಹುಮುಖ್ಯ ಎಂದು ನಂಬಿತು ಬಿಜೆಪಿ. 24 ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ನಡೆಸಿದ ವಾಜಪೇಯಿ ಉದಾಹರಣೆಯನ್ನು ಇಂದಿನ ರಾಜಕಾರಣವೂ ಬಾರಿ ಬಾರಿ ಉಲ್ಲೇಖಿಸಿದೆ.

ನರೇಂದ್ರ ಮೋದಿಯವರು ಎನ್.ಡಿ.ಎ.ಮಿತ್ರಪಕ್ಷಗಳನ್ನು ವಾಜಪೇಯಿ ಅವರಂತೆ ನಡೆಸಿಕೊಳ್ಳಬೇಕು ಎಂದು ಶಿರೋಮಣಿ ಅಕಾಲಿದಳ ಮತ್ತು ಶಿವಸೇನೆ ಹಲವು ಬಾರಿ ಹೇಳಿವೆ. ವಾಜಪೇಯಿ ಕಾಲದ ಬಿಜೆಪಿಗೆ ಬಹುಮತ ಇರಲಿಲ್ಲ, ಆದರೆ ಮೋದಿಯವರ ಕಾಲದ ಬಿಜೆಪಿಗೆ ಬಹುಮತ ಇದೆ ಎಂಬುದು ಮೋದಿ ಬೆಂಬಲಿಗರ ಸಮರ್ಥನೆ.

ಆದ್ಮೀ ಠೀಕ್ ಹೈ, ಗಲತ್ ಪಾರ್ಟೀ ಮೇಂ ಹೈಂ ಎಂಬ ಟೀಕೆಯನ್ನು ಅವರು ನಗುತ್ತಲೇ ಎದುರಿಸಿದ ರೀತಿ ಅವರ ಮಾತಿನ ಚಮತ್ಕಾರಕ್ಕೆ ಹಿಡಿದ ಕನ್ನಡಿಯಾಗಿತ್ತು.

**

* ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಏಮ್ಸ್‌) ಗುರುವಾರ ಸಂಜೆ 5.05ಕ್ಕೆ ನಿಧನ

* ರಾಜ್‌ಘಾಟ್‌ ಸಮೀಪದ ಸ್ಮೃತಿ ಸ್ಥಳದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಅಂತ್ಯಸಂಸ್ಕಾರ

* ಕೃಷ್ಣಮೆನನ್‌ ಮಾರ್ಗದಲ್ಲಿರುವ ನಿವಾಸದಲ್ಲಿ ಶುಕ್ರವಾರ ಬೆಳಗ್ಗಿನವರೆಗೆ ಅಂತಿಮ ದರ್ಶನಕ್ಕೆ ಅವಕಾಶ

* ಬಿಜೆಪಿ ಕಚೇರಿಯಲ್ಲಿ ಬೆಳಿಗ್ಗೆ 9 ರಿಂದ ಮೃತದೇಹ ಇರಿಸಲಾಗುವುದು

* ದೇಶದಾದ್ಯಂತ ಏಳು ದಿನಗಳ ಶೋಕಾಚರಣೆ

ಬರಹ ಇಷ್ಟವಾಯಿತೆ?

 • 15

  Happy
 • 2

  Amused
 • 6

  Sad
 • 2

  Frustrated
 • 3

  Angry

Comments:

0 comments

Write the first review for this !