‘ಖೇಲ್‌ ಭೀ ಜೀತಿಯೆ, ದಿಲ್ ಭೀ ಜೀತಿಯೆ’: ಅಜಾತಶತ್ರುವಿನ ಕ್ರಿಕೆಟ್ ನಂಟು

7
ಪಾಕ್ ಪ್ರವಾಸಕ್ಕೂ ಮುನ್ನ ಕ್ರಿಕೆಟ್‌ ತಂಡಕ್ಕೆ ಬ್ಯಾಟ್ ನೀಡಿ ಶುಭ ಹಾರೈಸಿದ್ದ ಅಟಲ್

‘ಖೇಲ್‌ ಭೀ ಜೀತಿಯೆ, ದಿಲ್ ಭೀ ಜೀತಿಯೆ’: ಅಜಾತಶತ್ರುವಿನ ಕ್ರಿಕೆಟ್ ನಂಟು

Published:
Updated:

ನವದೆಹಲಿ: ‘ಖೇಲ್‌ ಭೀ ಜೀತಿಯೆ, ದಿಲ್ ಭೀ ಜೀತಿಯೆ (ಪಂದ್ಯವನ್ನೂ ಗೆಲ್ಲಿ, ಹೃದಯವನ್ನೂ ಗೆಲ್ಲಿ)’. ಇದು 2004ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಸೌರವ್‌ ಗಂಗೂಲಿ ನೇತೃತ್ವದ ಭಾರತ ಕ್ರಿಕೆಟ್ ತಂಡದ ಬಳಿ ಅಟಲ್ ಬಿಹಾರಿ ವಾಜಪೇಯಿ ಮಾಡಿದ ಮನವಿ.

ಬರೋಬ್ಬರಿ 19 ವರ್ಷಗಳ ಬಳಿಕ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಪಂದ್ಯ ವೀಕ್ಷಣೆಗೆಂದು 20 ಸಾವಿರ ಮಂದಿಗೆ ವೀಸಾ ದೊರೆತಿತ್ತು. ಸಚಿನ್ ತೆಂಡೂಲ್ಕರ್, ರಾಹುಲ್‌ ದ್ರಾವಿಡ್, ಅನಿಲ್ ಕುಂಬ್ಳೆ, ವಿ.ವಿ.ಎಸ್‌. ಲಕ್ಷ್ಮಣ್ ಒಳಗೊಂಡ ಪ್ರಮುಖ ಆಟಗಾರರ ತಂಡವನ್ನು ಪಾಕಿಸ್ತಾನ ಪ್ರವಾಸಕ್ಕೆ ತೆರಳುವ ಮುನ್ನ ವಾಜಪೇಯಿ ಭೇಟಿ ಮಾಡಿದ್ದರು.

ಪಾಕಿಸ್ತಾನಕ್ಕೆ ತೆರಳುವ ಒಂದು ಗಂಟೆ ಮುನ್ನ ವಾಜಪೇಯಿ ಅವರು ಆಟಗಾರರನ್ನು ಭೇಟಿಯಾದರು. ಪ್ರವಾಸದ ವೇಳೆ ನಿಮ್ಮ ಧ್ಯೇಯ ಪಂದ್ಯಗಳನ್ನೂ ಹೃದಯಗಳನ್ನೂ ಗೆಲ್ಲುವುದಾಗಿರಬೇಕು ಎಂದರು. ಜತೆಗೆ, ತಂಡದ ನಾಯಕ ಗಂಗೂಲಿ ಅವರಿಗೆ ಬ್ಯಾಟೊಂದನ್ನು ನೀಡಿದರು. ಅದರಲ್ಲಿ ‘ಖೇಲ್ ಹಿ ನಹಿ, ದಿಲ್ ಭೀ ಜೀತಿಯೆ, ಶುಭಕಾಮನಾಯೆ (ಪಂದ್ಯ ಮಾತ್ರವಲ್ಲ, ಹೃದಯವನ್ನೂ ಗೆಲ್ಲಬೇಕು, ಶುಭಾಶಯಗಳು)’ ಎಂಬುದಾಗಿ ಬರೆದಿತ್ತು ಎಂದು ಆಗ ತಂಡದ ಮ್ಯಾನೇಜರ್ ಆಗಿದ್ದ ಡಾ. ರತ್ನಾಕರ್ ಶೆಟ್ಟಿ ನೆನಪಿಸಿಕೊಂಡಿದ್ದಾರೆ.

ವಾಜಪೇಯಿ ಅವರ ಆಶಯದಂತೆಯೇ ಏಕದಿನ ಮತ್ತು ಟೆಸ್ಟ್‌ ಸರಣಿಗಳೆರಡನ್ನೂ ಗೆದ್ದಿದ್ದ ಭಾರತ ತಂಡ ಪಾಕಿಸ್ತಾನದ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿಯೂ ಯಶಸ್ವಿಯಾಗಿತ್ತು.

ಇನ್ನಷ್ಟು: 

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !