ವಾಜಪೇಯಿ ನಿಧನ; ಸಾಮಾಜಿಕ ಮಾಧ್ಯಮ, ಟಿವಿ ಮಾಧ್ಯಮಗಳಲ್ಲಿ ವದಂತಿ

7

ವಾಜಪೇಯಿ ನಿಧನ; ಸಾಮಾಜಿಕ ಮಾಧ್ಯಮ, ಟಿವಿ ಮಾಧ್ಯಮಗಳಲ್ಲಿ ವದಂತಿ

Published:
Updated:
Deccan Herald

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ದೆಹಲಿಯ ಏಮ್ಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಆರೋಗ್ಯ ಗಂಭೀರವಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಟಿವಿ ಮಾಧ್ಯಮಗಳಲ್ಲಿ ’ಅಜಾತಶತ್ರು’ವಿಗೆ ಅದಾಗಲೇ ಶ್ರದ್ಧಾಂಜಲಿ ಅರ್ಪಿಸಲಾಗಿದೆ. 

ಏಮ್ಸ್‌ಗೆ ಭೇಟಿ ನೀಡಿ ಹೊರಬಂದ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಾಧ್ಯಮಗಳಿಗೆ ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಕೆಲ ಮಾಧ್ಯಮಗಳು, ’ಹಿರಿಯ ರಾಜಕಾರಣಿ, ಕವಿ ವಾಜಪೇಯಿ’ ಅವರ ನಿಧನದ ಸುದ್ದಿಗಳನ್ನು ಪ್ರಕಟಿಸಿದವು. ಟ್ವಿಟರ್‌, ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಛಲವಾದಿಗೆ ಅಂತಿಮ ನಮನ ಸಲ್ಲಿಸಲಾಯಿತು. 

ರಾಜನಾಥ್‌ ಸಿಂಗ್‌ ಅವರು ಛತ್ತೀಸ್‌ಗಡದ ಗವರ್ನರ್‌ ನಿಧನದ ಕುರಿತು ಪ್ರಸ್ತಾಪಿಸಿದ್ದರು. ಡಿಡಿ ನ್ಯೂಸ್‌ ಸಹ ಸುದ್ದಿ ಪ್ರಕಟಿಸಿ; ಇದು ವದಂತಿಯಿಂದಾಗ ತಪ್ಪು ಎಂದು ಸರಿಪಡಿಸಿಕೊಂಡಿತು. ಬಿಜೆಪಿ ಮುಖಂಡ ಬಿ.ಎಸ್‌.ಯಡಿಯೂರಪ್ಪ ಸೇರಿ ಅನೇಕ ನಾಯಕರು, ಸಂಘ–ಸಂಸ್ಥೆಗಳಅಧಿಕೃತ ಟ್ವಿಟರ್‌ ಖಾತೆಗಳು ನಿಧನ ಸುದ್ದಿ ಹಂಚಿಕೊಂಡು ಸಂತಾಪ ಸೂಚಿಸಿದವು. 

ಆಸ್ಪತ್ರೆಯಿಂದ ಅಧಿಕೃತವಾಗಿ ಪ್ರಕಟಣೆಯಾಗದ ಹಿನ್ನೆಲೆಯಲ್ಲಿ ಟಿವಿ ಮಾಧ್ಯಮಗಳಲ್ಲಿ ಸುದ್ದಿ ಬದಲಾದವು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಣೆಗಳು ಅಳಿಸಿ ಹೋದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !