ಅಟಲ್‌ ಜಿ ನಿಧನ ತುಂಬಲಾರದ ನಷ್ಟ: ಮೋದಿ

7
ಬಿಜೆಪಿ ಹಿರಿಯ ನಾಯಕರಿಂದ ಸಂತಾಪ

ಅಟಲ್‌ ಜಿ ನಿಧನ ತುಂಬಲಾರದ ನಷ್ಟ: ಮೋದಿ

Published:
Updated:

ನವದೆಹಲಿ: ‘ಪ್ರೀತಿಯ ಅಟಲ್‌ ಜಿ ಅವರ ನಿಧನದಿಂದ ಒಂದು ಯುಗವೇ ಅಂತ್ಯಗೊಂಡಂತಾಗಿದೆ. ದಶಕಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ಅವರ ಅಗಲುವಿಕೆಗೆ ಇಡೀ ಭಾರತ ದುಃಖಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿರುವ ಅವರು, ‘ನನಗೆ ಇದೊಂದು ತುಣಬಲಾರದ ನಷ್ಟ. ಅವರೊಂದಿಗಿನ ಒಡನಾಟದ ಅಸಂಖ್ಯಾತ ನೆನಪುಗಳು ನನ್ನೊಂದಿಗಿವೆ. ನನ್ನಂತಹ ಕಾರ್ಯಕರ್ತರಿಗೆ ಅವರು ಸ್ಫೂರ್ತಿಯಾಗಿದ್ದರು. ಅವರ ತೀಕ್ಷ್ಣ ಬುದ್ಧಿವಂತಿಕೆ ಯಾವತ್ತೂ ನೆನಪಿನಲ್ಲಿರಲಿದೆ. ಬಿಜೆಪಿ ಕಾರ್ಯಕರ್ತರಿಗೆ ಮತ್ತು ಲಕ್ಷಾಂತರ ಮಂದಿಗೆ ಇದು ದುಃಖದ ಕ್ಷಣ. ಓಂ ಶಾಂತಿ’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಅಟಲ್‌ ಜಿ ಅವರ ಮಾದರಿ ನಾಯಕತ್ವ 21ನೇ ಶತಮಾನದ ಸದೃಢ ಭಾರತಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿತ್ತು. ಅನೇಕ ಕ್ಷೇತ್ರಗಳಲ್ಲಿ ಅವರು ಅನುಸರಿಸಿದ್ದ ದೂರದರ್ಶಿತ್ವವುಳ್ಳ ನೀತಿಗಳು ಪ್ರತಿಯೊಬ್ಬ ಭಾರತೀಯ ನಾಗರಿಕನ ಹೃದಯವನ್ನು ತಟ್ಟಿದೆ’ ಎಂದು ಮೋದಿ ಉಲ್ಲೇಖಿಸಿದ್ದಾರೆ.

‘ಅಟಲ್‌ ಜಿ ಅವರ ಶ್ರಮ ಮತ್ತು ಹೋರಾಟದಿಂದ ಬಿಜೆಪಿ ಹಂತ ಹಂತವಾಗಿ ಬೆಳೆದಿದೆ. ಬಿಜೆಪಿಯ ಸಂದೇಶವನ್ನು ಸಾರಲು ಅವರು ದೇಶದ ಉದ್ದಗಲ ಸಂಚರಿಸಿದ್ದರು. ಅದರಿಂದಾಗಿ ರಾಷ್ಟ್ರ ರಾಜಕಾರಣ ಮತ್ತು ಹಲವು ರಾಜ್ಯಗಳಲ್ಲಿ ಬೆಳೆಯುವಂತಾಯಿತು’ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

*******

‘ಸ್ವಾತಂತ್ರ್ಯೋತ್ತರ ಭಾರತದ ಮಹಾನ್ ನಾಯಕರಲ್ಲಿ ವಾಜಪೇಯಿ ಅವರೂ ಒಬ್ಬರು ಎಂಬುದರಲ್ಲಿ ಸಂಶಯವಿಲ್ಲ. ಅವರ ವ್ಯಕ್ತಿತ್ವ, ಭಾಷಣ, ಕರ್ತವ್ಯಪರತೆ, ಸ್ನೇಹಶೀಲತೆ, ಗಮನಾರ್ಹ ವ್ಯಕ್ತಿತ್ವ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತಹದ್ದು’
– ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ

‘ಅಟಲ್‌ ಜಿ ಅವರು ಭಾರತದ ರಾಜಕಾರಣದಲ್ಲಿ ಬಿಜೆಪಿ ಒಂದು ಆಲದ ವೃಕ್ಷವಾಗಿ ಬೆಳೆಯುವಂತೆ ಮಾಡಿದವರು. ಜನಪ್ರಿಯ ನಾಯಕರಾಗಿದ್ದ ಅವರು ಅಧಿಕಾರ ಇರುವುದು ಸೇವೆ ಮಾಡಲಿಕ್ಕಾಗಿ ಎಂದು ಭಾವಿಸಿದ್ದವರು. ಹಾಗಾಗಿಯೇ ಎಲ್ಲ ಪಕ್ಷ, ಸಮಾಜದ ಜನರು ಅವರನ್ನು ಗೌರವ ಮತ್ತು ಪ್ರೀತಿಯಿಂದ ಕಾಣುತ್ತಾರೆ’
– ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !