47 ವರ್ಷಗಳ ಕಾಲ ಸಂಸದರಾಗಿದ್ದ ಅಟಲ್‌

7

47 ವರ್ಷಗಳ ಕಾಲ ಸಂಸದರಾಗಿದ್ದ ಅಟಲ್‌

Published:
Updated:

ನವದೆಹಲಿ: ಸುದೀರ್ಘ ಅವಧಿಗೆ ಸಂಸದೀಯ ಪಟುವಾಗಿ ಸೇವೆ ಸಲ್ಲಿಸಿದ ಕೀರ್ತಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ.

ಹತ್ತು ಸಲ ಲೋಕಸಭೆ ಮತ್ತು ಎರಡು ಸಲ ರಾಜ್ಯಸಭೆ ಸದಸ್ಯರಾಗಿದ್ದ ವಾಜಪೇಯಿ, ಸುಮಾರು 47 ವರ್ಷಗಳ ಕಾಲ ಸಂಸದರಾಗಿದ್ದರು.

ಒಂದು ಬಾರಿ ಮಾತ್ರ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದರು. 1984ರಲ್ಲಿ ಗ್ವಾಲಿಯರ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಾಧವರಾವ್‌ ಸಿಂಧಿಯಾ ವಿರುದ್ಧ 2 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

1991ರಿಂದ 2009ರವರೆಗೆ ಲಖನೌ ಕ್ಷೇತ್ರದಿಂದ 10, 11, 12, 13 ಮತ್ತು 14ನೇ ಲೋಕಸಭೆಯನ್ನು ಅವರು ಪ್ರತಿನಿಧಿಸಿದ್ದರು.

2ನೇ ಮತ್ತು 4ನೇ ಲೋಕಸಭೆಯನ್ನು ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 5ನೇ ಲೋಕಸಭೆಗೆ ಗ್ವಾಲಿಯರ್‌ದಿಂದ ಹಾಗೂ 6 ಮತ್ತು 7ನೇ ಲೋಕಸಭೆಗೆ ನವದೆಹಲಿಯಿಂದ ಆಯ್ಕೆಯಾಗಿದ್ದರು.

1962 ಮತ್ತು 1986ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. 2005ರ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಚುನಾವಣೆ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ವಾಜಪೇಯಿ ಅವರು ಘೋಷಿಸಿದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !