ಸಂಜೆ 4ಕ್ಕೆ ದೆಹಲಿಯ ‘ಸ್ಮೃತಿ ಸ್ಥಲ’ದಲ್ಲಿ ವಾಜಪೇಯಿ ಅಂತ್ಯಕ್ರಿಯೆ

7

ಸಂಜೆ 4ಕ್ಕೆ ದೆಹಲಿಯ ‘ಸ್ಮೃತಿ ಸ್ಥಲ’ದಲ್ಲಿ ವಾಜಪೇಯಿ ಅಂತ್ಯಕ್ರಿಯೆ

Published:
Updated:

ನವದೆಹಲಿ:  ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ 4ಕ್ಕೆ ದೆಹಲಿಯ ‘ಸ್ಮೃತಿ ಸ್ಥಲ'ದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತಿಳಿಸಿದರು.

ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ನಿವಾಸದಿಂದ ತೆಗದುಕೊಂಡು ಹೋಗಿ ಬೆಳಿಗ್ಗೆ 9ಕ್ಕೆ ಬಿಜೆಪಿ ಮುಖ್ಯ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು ಎಂದು ಅವರು ಗುರುವಾರ ರಾತ್ರಿ ವಾಜಪೇಯಿ ಅವರ ನಿವಾಸದ ಬಳಿ ಸುದ್ದಿಗಾರರಿಗೆ ತಿಳಿಸಿದರು.

ಶುಕ್ರವಾರ ಮಧ್ಯಾಹ್ನ 1ಕ್ಕೆ ಅಂತಿಮ ಯಾತ್ರೆ ಆರಂಭವಾಗಲಿದೆ. ಸಂಜೆ 4ಕ್ಕೆ ‘ಸ್ಮೃತಿ ಸ್ಥಲ’ದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಅವರು ಮಾಹಿತಿ ನೀಡಿದರು. 

ವಾಜಪೇಯಿ ಅವರು ಕೇವಲ ಬಿಜೆಪಿಗೆ ಮಾತ್ರ ಕೊಡುಗೆ ನೀಡಿಲ್ಲ. ಸಾರ್ವಜನಿಕ ಜೀವನಲ್ಲಿ ಇಡೀ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.  ಇಂದು ವ್ಯಕ್ತಿಗವಾಗಿ ಅವರು ಇಲ್ಲವಾಗಿರಬಹುದು. ಅವರು ರೂಪಿಸಿದ ಜನಾಂದೋಲನ, ಚಿಂತನೆಗಳು ಮುಂದುವರಿಯಲಿದೆ ಎಂದು ಅಮಿತ್‌ ಶಾ ಹೇಳಿದರು.

ವಾಜಪೇಯಿ ಅವರ ನಿಧನದಿಂದಾಗಿ ಭಾರತದ ಧ್ರುವ ತಾರೆಯೊಂದನ್ನು ಕಳೆದುಕೊಂಡಂತಾಗಿದೆ. ಅವರು ಬಹುಮುಖ ವ್ಯಕ್ತಿತ್ವದವರಾಗಿದ್ದರು. ರಾಷ್ಟ್ರ ಅತ್ಯುತ್ತಮ ನಾಯಕನ್ನು ಕಳೆದುಕೊಂಡಿದೆ. ಬಿಜೆಪಿ ತನ್ನ ಮೊದಲ ರಾಷ್ಟ್ರೀಯ ಅಧ್ಯಕ್ಷರನ್ನು ಕಳೆದುಕೊಂಡಿದೆ. ಕೋಟ್ಯಂತರ ಯುಕರಿಗೆ ಪ್ರೇರಣಾ ಶಕ್ತಿಯೊಂದು ಇಲ್ಲದಂತಾಗಿದೆ. ಅವರ ಸ್ಥಾನವನ್ನು ತುಂಬಲು ಅಸಾಧ್ಯ ಎಂದು ಅವರು ತಮ್ಮ ನಾಯಕನ ವ್ಯಕ್ತಿತ್ವವನ್ನು ಬಣ್ಣಿಸಿದರು.

ಪ್ರಸ್ತುತ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ಏಮ್ಸ್‌ನಿಂದ ಅವರ ನಿವಾಸಕ್ಕೆ ತರಲಾಗಿದೆ. ಗಣ್ಯರು ಮನೆಗೆ ತೆರಳಿ ನಮನ ಸಲ್ಲಿಸುತ್ತಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು.

ವಾಜಪೇಯಿ ಅವರ ನಿವಾಸದ ಹೊರಗಿನ ವಾತಾವರಣ, ಗಣ್ಯರ ಆಗಮನ ಇತ್ಯಾದಿ ಸಂಗತಿಗಳನ್ನು ಎಎನ್‌ಐ ನೇರ ಪ್ರಸಾರ ಮಾಡುತ್ತಿದೆ. 

 


2005ರ ನವೆಂಬರ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಚಿತ್ರ: ಪಿಟಿಐ

* ಇದವನ್ನೂ ಓದಿ...

ಪೋಖ್ರಾನ್‌ ಅಣ್ವಸ್ತ್ರ ಪರೀಕ್ಷೆ ಯಶಸ್ಸಿನ ಹಿಂದೆ ವಾಜಪೇಯಿ ನಿರ್ಧಾರದ ಬಲ

ಹಿಂದುತ್ವದ ಬಿಗಿ ಎರಕದೊಳಗೂ ಮೈಕೊಡವುತ್ತಿದ್ದ ರಾಷ್ಟ್ರನಾಯಕ​

* ನನ್ನವರ ಗುಂಪಲ್ಲಿ ನನಗೆ ಗೆಳೆಯರೇ ಇಲ್ಲ: ಕವಿ ವಾಜಪೇಯಿ

ವಾಜಪೇಯಿ ನಿಧನ:  ಮನೆಯೆದುರೂ ಜಮಾಯಿಸಿದ ಜನಜಂಗುಳಿ...

ಯುದ್ಧದ ನಡುವೆಯೂ ಸ್ನೇಹ ಸೇತು ಬೆಸೆದಿದ್ದ ‘ಅಜಾತಶತ್ರು’​

ಅಜಾತಶತ್ರುವಿನ ಹೆಜ್ಜೆ ಗುರುತುಗಳು

ವಾಜಪೇಯಿ: ಹೋಲಿಕೆ ಇಲ್ಲದ ನಾಯಕ​

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !