ಬಿಹಾರ: ಡೆತ್‌ನೋಟ್‌ ಬರೆದಿಟ್ಟು ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಆತ್ಮಹತ್ಯೆ

7

ಬಿಹಾರ: ಡೆತ್‌ನೋಟ್‌ ಬರೆದಿಟ್ಟು ಆಸ್ಟ್ರೇಲಿಯಾ ಮೂಲದ ವ್ಯಕ್ತಿ ಆತ್ಮಹತ್ಯೆ

Published:
Updated:

ಬಿಹಾರ: ಇಲ್ಲಿನ ಬೋಧ ಗಯಾ ಸಮೀಪದ ಅರಣ್ಯವೊಂದರಲ್ಲಿ ಆಸ್ಟ್ರೇಲಿಯಾ ಮೂಲದ 33 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಮೊಬೈಲ್‌ ನಂಬರ್‌ ಬರೆದಿದ್ದು, ನನ್ನ ಸಾವಿನ ಬಗ್ಗೆ ಸಹೋದರಿಗೆ ತಿಳಿಸುವಂತೆ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಹೀತ್‌ ಅಲಾನ್‌' ಮೃತಪಟ್ಟ ವ್ಯಕ್ತಿ. ಇವರು ಸಿಡ್ನಿಯ ಉಪನಗರವಾದ ವೆಸ್ಟ್‌ಮೀಡ್‌ನ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ.

ಇಂದು ಬೆಳ್ಳಿಗೆ ಸ್ಥಳೀಯರೊಬ್ಬರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬ್ಯಾಗ್‌, ಡೈರಿ ಸೇರಿದಂತೆ ಇತರೆ ವಸ್ತುಗಳನ್ನು ಪರಿಶೀಲನೆ ನಡೆಸಿದ್ದಾರೆ.

ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅನುಗ್ರಹ ನಾರಾಯಣ್‌ ಮೆಡಿಕಲ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !