ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರಿ ಜಿಲ್ಲೆಯ ಶಿಪ್ಕಿ ಲಾ ಬಳಿ ಗುರುವಾರ ಬೆಳಗ್ಗೆ ಪುನಃ ಹಿಮಪಾತ ಸಂಭವಿಸಿದ್ದು, ಇದರಿಂದ ಬುಧವಾರ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿ ಉಂಟಾಗಿದೆ.
ಬುಧವಾರ ಉಂಟಾದ ಹಿಮಪಾತ ದಲ್ಲಿ ಸೇನೆಯ ಆರು ಯೋಧರು ಸಿಲುಕಿಕೊಂಡಿದ್ದರು. ಇವರಲ್ಲಿ ಒಬ್ಬ ಯೋಧನ ಮೃತದೇಹ ದೊರಕಿದ್ದು, ಉಳಿದವರು ಪತ್ತೆಯಾಗಿಲ್ಲ. ಇವರು ಸಹ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಜಮ್ಮು–ಕಾಶ್ಮೀರ ಹೆದ್ದಾರಿ ಬಂದ್:ಜಮ್ಮು–ಶ್ರೀನಗರದಲ್ಲಿ ಭಾರಿ ಮಳೆ ಯಿಂದಾಗಿ ಗುರುವಾರ ಐದು ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಎರಡನೇ ದಿನವಾದ ಗುರುವಾರವೂ ಹೆದ್ದಾರಿ ಮುಚ್ಚಲಾಗಿದ್ದು, ಜಮ್ಮುವಿನಿಂದ ಕಾಶ್ಮೀರ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ರಾಮಬನ, ಉಧಂಪುರ ಹಾಗೂ ಜಮ್ಮುವಿನ ವಿವಿಧೆಡೆ 600ಕ್ಕೂ ಹೆಚ್ಚು ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.