ಶುಕ್ರವಾರ, ಏಪ್ರಿಲ್ 3, 2020
19 °C

‘ರಾಷ್ಟ್ರವಾದ’ ಪದ ಬಳಕೆ ಬೇಡ, ಅದು ನಾಜಿವಾದದ ಸೂಚಕ: ಮೋಹನ್‌ ಭಾಗವತ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ: 'ರಾಷ್ಟ್ರವಾದ ಎಂಬುದು ಹಿಟ್ಲರ್‌ನ ನಾಜಿ ಮೂಲದ್ದು ಎಂಬಂತೆ ನೋಡಲಾಗುತ್ತಿದೆ.  ಹೀಗಾಗಿ ಜನ ರಾಷ್ಟ್ರವಾದ ಎಂಬ ಪದದ ಬಳಕೆಯನ್ನು ನಿಲ್ಲಿಸಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಹೇಳಿದ್ದಾರೆ. 

ಮೊರಾಬಾದಿಯ ಮುಖರ್ಜಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂಘದ ಕಾರ್ಯಕ್ರಮವೊಂದಲ್ಲಿ ಮಾತನಾಡಿರುವ ಅವರು, ಈ ಮಾತನ್ನು ಹೇಳಿದರು. 

ಇತ್ತೀಚೆಗೆ ಬ್ರಿಟನ್‌ಗೆ ಭೇಟಿ ನೀಡಿದ್ದ ಅವರು, ಅಲ್ಲಿನ ಆರ್‌ಎಸ್‌ಎಸ್‌ ಕಾರ್ಯಕರ್ತರೊಂದಿಗೆ ನಡೆದ ಮಾತುಕತೆಯನ್ನು ಪ್ರಸ್ತಾಪಿಸಿದ್ದರು. 

‘ಇಂಗ್ಲಿಷ್‌ನ ನ್ಯಾಷನಲಿಸಂ ಇಂಗ್ಲೆಂಡ್‌ನಲ್ಲಿ ಬೇರೆಯದ್ದೇ ಅರ್ಥಕೊಡುತ್ತದೆ. ಹಾಗಾಗಿ ಅದನ್ನು ಬಳಕೆ ಮಾಡದೇ ಇರುವುದು ಒಳಿತು. ಯಾರೂ ಕೂಡ ರಾಷ್ಟ್ರವಾದದ ಪದ ಬಳಕೆ ಮಾಡಬಾರದು. ರಾಷ್ಟ್ರ ಮತ್ತು ರಾಷ್ಟ್ರೀಯತೆ ಎಂಬುದೇನೋ ಸರಿ. ಆದರೆ, ರಾಷ್ಟ್ರವಾದ ಎಂಬ ಪದವು ಹಿಟ್ಲರ್‌ನ ನಾಜಿವಾದವನ್ನು ಪ್ರತಿಪಾದಿಸುತ್ತದೆ’ ಎಂದು ಕಾರ್ಯಕರ್ತ ಹೇಳಿದ್ದಾಗಿ ಮೋಹನ್‌ ಭಾಗವತ್‌ ತಿಳಿಸಿದರು. 

‘ಮೂಲಭೂತವಾದದ ಕಾರಣದಿಂದಾಗಿ ದೇಶದೆಲ್ಲೆಡೆ ಗೊಂದಲಮಯ ವಾತಾವರಣ ಮನೆ ಮಾಡಿದೆ. ಭಾರತದ ನೀತಿಗಳು ಒಂದೋ ಜನರು ದಾಸರಾಗುವಂತೆ ಮಾಡುತ್ತದೆ  ಅಥವಾ ಮತ್ತೊಬ್ಬರನ್ನು ದಾಸರನ್ನಾಗಿ ಮಾಡಿಕೊಳ್ಳುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವ ಗುಣ ಭಾರತದಲ್ಲಿದೆ. ಭಾರತದದ್ದು ಹಿಂದು ಸಂಸ್ಕೃತಿ. ವೈವಿದ್ಯತೆಯನ್ನೂ ಮೀರಿ ಇಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಪರೋಕ್ಷವಾಗಿ ಬೆಸೆದುಕೊಂಡಿರುತ್ತಾರೆ,’ ಮೋಹನ್‌ ಭಾಗವತ್‌ ಹೇಳಿದ್ದಾರೆ. 

‘ಭಾರತವನ್ನು ವಿಶ್ವನಾಯಕನನ್ನಾಗಿ ಮಾಡುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿದೆ. ಒಂದು ರಾಷ್ಟ್ರವಾಗಿ ಭಾರತ ಬೆಳೆದರೆ ಅದು ಇಡೀ ಜಗತ್ತಿಗೇ ಅನುಕೂಲಕಾರಿ’ ಎಂದೂ ಅವರು ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು