ಸೋಮವಾರ, ನವೆಂಬರ್ 18, 2019
23 °C
ಅಂತಿಮ ಹಂತದಲ್ಲಿ ಅಯೋಧ್ಯೆ ವಿವಾದ ವಿಚಾರಣೆ

ಅಯೋಧ್ಯೆ ವಿವಾದ: ಮುಸ್ಲಿಂ ಕಕ್ಷಿದಾರರಿಗೆ ಮಾತ್ರ ಪ್ರಶ್ನೆ ಏಕೆ?

Published:
Updated:

ನವದೆಹಲಿ: ಹಿಂದೂ ಕಕ್ಷಿದಾರರಿಗೆ ಹೋಲಿಸಿದರೆ, ತಮಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂದು ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಪ್ರಕರಣದ ವಿಚಾರಣೆ ವೇಳೆ ಮುಸ್ಲಿಂ ಕಕ್ಷಿದಾರರು ಆರೋಪಿಸಿದ್ದಾರೆ. 

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದ ಎದುರು ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್ ಧವನ್ ಅವರು ಈ ಆರೋಪ ಮಾಡಿದ್ದಾರೆ.

ಸೋಮವಾರ 38ನೇ ದಿನದ ಕಲಾಪ ನಡೆಯಿತು. ರಾಮ್ ಲಲ್ಲಾ ಪರ ವಕೀಲ ಸಿ.ಎಸ್. ವೈದ್ಯನಾಥನ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ರಾಮ್ ಲಲ್ಲಾ ಪ್ರತಿನಿಧಿಸುವ ಮತ್ತೊಬ್ಬ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್  ಕೆ. ಪರಾಶರನ್ ಅವರೂ ಆರೋಪವನ್ನು ಅಲ್ಲಗಳೆದರು. ಇಂತಹ ಹೇಳಿಕೆ ನೀಡುವ ಮೂಲಕ ತುಂಬಿದ ನ್ಯಾಯಾಲಯದಲ್ಲಿ ಗಮನ ಸೆಳೆಯಲು ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. 

‘ಪ್ರಾರ್ಥನಾ ಸ್ಥಳ ಪ್ರವೇಶಿಸಲು ಹಿಂದೂಗಳಿಗೆ ಮಾತ್ರ ಹಕ್ಕಿದೆ. ಅಂದಮಾತ್ರಕ್ಕೆ ಅವರಿಗೆ ವಿವಾದಿತ ಸ್ಥಳದ ಮಾಲೀಕತ್ವ ದೊರೆತಂತಾಗುವುದಿಲ್ಲ’ ಎಂಬ ಧವನ್ ಅವರ ವಾದವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು. 

ಪ್ರತಿಕ್ರಿಯಿಸಿ (+)