ಮಂಗಳವಾರ, ಡಿಸೆಂಬರ್ 10, 2019
26 °C
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ

ಧರ್ಮಸಂಸತ್‌ನಲ್ಲಿ ದಿನಾಂಕ ಘೋಷಣೆ: ಮಹಾಂತ ಸುರೇಶ್‌ ದಾಸ್‌ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಲಖನೌ/ನವದೆಹಲಿ: ಬಾಬರಿ ಮಸೀದಿ ಧ್ವಂಸದ 26ನೇ ವರ್ಷಾಚರಣೆ ಗುರುವಾರ ಅಯೋಧ್ಯೆ ಮತ್ತು ಇತರೆಡೆ ಶಾಂತಿಯುತವಾಗಿ ನಡೆಯಿತು.

‘ಶೌರ್ಯ ದಿನ’ವನ್ನಾಗಿ ಆಚರಿಸಿದ ವಿಶ್ವ ಹಿಂದೂ ಪರಿಷತ್‌, ಅಯೋಧ್ಯೆಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸಂತರು ಭಾಗಿಯಾಗಿದ್ದ ಈ ಕಾರ್ಯಕ್ರಮದಲ್ಲಿ ರಾಮ ಮಂದಿರ ನಿರ್ಮಿಸಿಯೇ ತೀರುವುದಾಗಿ ಘೋಷಿಸಿದರು.

‘ಪ್ರಯಾಗರಾಜ್‌ನಲ್ಲಿ ಮುಂದಿನ ತಿಂಗಳು ನಡೆಯುವ ಧರ್ಮ ಸಂಸತ್ ಸಭೆಯಲ್ಲಿ ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಿಸಲಾಗುವುದು’ ಮಹಾಂತ ಸುರೇಶ್‌ ದಾಸ್‌ ಸ್ವಾಮೀಜಿ ತಿಳಿಸಿದರು.

‘ಮುಸ್ಲಿಂ ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿ ಪ್ರತಿಭಟನೆ ವ್ಯಕ್ತಪಡಿಸಿದವು. ‘ವಿವಾದಿತ ಸ್ಥಳದಲ್ಲೇ ಮಸೀದಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು