ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಎಚ್‍ಪಿ, ಶಿವಸೇನಾ ರ‍್ಯಾಲಿಗೆ ಸಿದ್ಧತೆ; ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್

Last Updated 25 ನವೆಂಬರ್ 2018, 1:47 IST
ಅಕ್ಷರ ಗಾತ್ರ

ಅಯೋಧ್ಯೆ: ಮೊದಲು ಮಂದಿರ, ಆಮೇಲೆ ಸರ್ಕಾರ (ಪೆಹಲೇ ಮಂದಿರ್, ಫಿರ್ ಸರ್ಕಾರ್) ಎಂಬ ಘೋಷಣೆಯೊಂದಿಗೆ ವಿಶ್ವ ಹಿಂದೂ ಪರಿಷತ್ ಮತ್ತು ರಾಮ ಮಂದಿರ ನಿರ್ಮಾಣದ ದಿನಾಂಕ ಹೇಳಿ ಎಂಬ ಒತ್ತಾಯದೊಂದಿದೆ ಶಿವಸೇನೆ ಇಂದು ಅಯೋಧ್ಯೆಯಲ್ಲಿ ಶಕ್ತಿ ಪ್ರದರ್ಶನ ನಡೆಸಲಿದೆ.

2 ಲಕ್ಷದಷ್ಟು ಕಾರ್ಯಕರ್ತರು ಭಾಗವಹಿಸುವ ಈ ರ‍್ಯಾಲಿಯ ಜತೆಗೆ ವಿಶ್ವ ಹಿಂದೂ ಪರಿಷತ್ ಧರ್ಮ ಸಭೆಯನ್ನು ಆಯೋಜಿಸಿದೆ.

ಅಯೋಧ್ಯೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ಮುಖ್ಯಮಂತ್ರಿ ಯೋಗಿಆದಿತ್ಯನಾಥ ಅವರಿಗೆ ನಿರ್ದೇಶಿಸಿದೆ.

ಸುರಕ್ಷಾ ವ್ಯವಸ್ಥೆಗಾಗಿ ಅಯೋಧ್ಯೆಯನ್ನು16 ವಲಯಗಳಾಗಿ ವಿಂಗಡಿಸಿದ್ದು ಈ ವಲಯಗಳಿಗೆ ಡಿಎಸ್‍ಪಿ‍ಗಳನ್ನು ನಿಯೋಜಿಸಲಾಗಿದೆ.ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ

ಎರಡು ಪ್ರತ್ಯೇಕ ರೈಲುಗಳಲ್ಲಿ ಶಿವಸೇನಾ ಕಾರ್ಯಕರ್ತರು ಅಯೋಧ್ಯೆಗೆ ತಲುಪಲಿದ್ದು, ಇದಕ್ಕೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ನೇತೃತ್ವ ನೀಡಲಿದ್ದಾರೆ.ವಿಎಚ್‍ಪಿ ಮತ್ತು ಶಿವಸೇನೆ ಪ್ರತ್ಯೇಕವಾಗಿ ರ‍್ಯಾಲಿ ನಡೆಸಲಿದೆ.ವಿಎಚ್‌‍ಪಿ ಇಂದು ನಾಗಪುರ್ ಮತ್ತು ಬೆಂಗಳೂರಿನಲ್ಲಿಯೂ ರ‍್ಯಾಲಿ ನಡೆಸಲಿದೆ.ಡಿಸೆಂಬರ್ 9 ರಂದು ದೆಹಲಿಯಲ್ಲಿ ರ‍್ಯಾಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT