ರಾಮ ಮಂದಿರಕ್ಕೆ ನಿರಂತರ ಒತ್ತಡ: ಸಂತರ ನಿರ್ಧಾರ

7

ರಾಮ ಮಂದಿರಕ್ಕೆ ನಿರಂತರ ಒತ್ತಡ: ಸಂತರ ನಿರ್ಧಾರ

Published:
Updated:

ನವದೆಹಲಿ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದೆ. ಸಂತರ ಉನ್ನತಾಧಿಕಾರ ಸಮಿತಿಯು ಶುಕ್ರವಾರ ಸಭೆ ಸೇರಿದೆ. ಮಂದಿರ ನಿರ್ಮಾಣಕ್ಕಾಗಿ ಶಾಸನ ರೂಪಿಸಲು ಸಂಸದರ ಮೇಲೆ ಒತ್ತಡ ಹೇರಲು ಈ ಸಮಿತಿ ನಿರ್ಧರಿಸಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಆಗಿರುವ ವಿಳಂಬದ ಬಗ್ಗೆ ಸಮಿತಿಯು ಅತೃಪ್ತಿ ವ್ಯಕ್ತಪಡಿಸಿದೆ. ಮಂದಿರ ನಿರ್ಮಾಣಕ್ಕಾಗಿ ಶಾಸನ ರಚಿಸಲು ಒತ್ತಡ ಹೇರುವುದಕ್ಕಾಗಿ ಜನಾಂದೋಲನ ನಡೆಸುವುದಕ್ಕೂ ಸಮಿತಿ ತೀರ್ಮಾನಿಸಿದೆ. 

2019ರ ಜನವರಿ 31ರಂದು ಅಲಹಾಬಾದ್‌ನಲ್ಲಿ ನಡೆಯಲಿರುವ ಧರ್ಮ ಸಂಸತ್‌ನಲ್ಲಿ ರಾಮಮಂದಿರ ನಿರ್ಮಾಣ ಚಳವಳಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದುಎಂದು ವಿಶ್ವ ಹಿಂದೂ ಪರಿಷತ್‌ ಹೇಳಿದೆ. 

ಸಂತರ ಸಭೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಕಾವೇರಿದ ಚರ್ಚೆ ನಡೆದಿದೆ. ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಕೆಲವು ಸಂತರು ಹಟ ಹಿಡಿದರು. 

ಸಂತರ ಕಾರ್ಯಸೂಚಿ

* ಅಕ್ಟೋಬರ್‌ನಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರಿಗೆ ಮನವಿ; ನವೆಂಬರ್‌ನಲ್ಲಿ ಪ್ರತಿ ಲೋಕಸಭಾ ಕ್ಷೇತ್ರದಲ್ಲೂ ಭಾರಿ ರ್‍ಯಾಲಿ

* ಡಿಸೆಂಬರ್‌ನಲ್ಲಿ ಪ್ರತಿ ದೇವಾಲಯದಲ್ಲಿಯೂ ಸ್ಥಳೀಯ ‍ಪರಂಪರೆಗೆ ಅನುಗುಣವಾಗಿ ಕಾರ್ಯಕ್ರಮ

* ಪ್ರಧಾನಿಯನ್ನು ಭೇಟಿಯಾಗಿ ರಾಮಭಕ್ತರ ಭಾವನೆ ಮನವರಿಕೆ ಮಾಡಲು ನಿರ್ಧಾರ 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !