ಶನಿವಾರ, ಸೆಪ್ಟೆಂಬರ್ 18, 2021
26 °C

ಬಾಬಾಗೆ ಲ್ಯಾಪ್‌ಟಾಪ್‌ ಗೊತ್ತಿಲ್ಲ: ಯೋಗಿ ವಿರುದ್ಧ ಅಖಿಲೇಶ್‌ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಗೋರಖಪುರ: ‘ಉತ್ತರ ಪ್ರದೇಶದ ಬಾಬಾ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಲ್ಯಾಪ್‌ಟಾಪ್‌ ಬಳಸಲು ಬರುವುದಿಲ್ಲ. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸುವುದನ್ನು ನಿಲ್ಲಿಸಿದ್ದಾರೆ’ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

‘ದ್ವೇಷ ಹರಡುವುದು ಬಿಟ್ಟು ಬಿಜೆಪಿಗೆ ಬೇರೇನೂ ಗೊತ್ತಿಲ್ಲ. ಸೋಲು ಖಚಿತ ಎಂಬುದು ಅರಿವಾದ ಬಳಿಕ ಅವರು ಸುಳ್ಳು ಹರಡುತ್ತಿದ್ದಾರೆ. ಈಗ ಅವರ ಭಾಷೆಯೇ ಬದಲಾಗಿದೆ’ ಎಂದು ಅಖಿಲೇಶ್‌ ಆರೋಪಿಸಿದ್ದಾರೆ. 

‘ಬಾಬಾ ಅವರು ಆಂಬುಲೆನ್ಸ್‌ ಸೇವೆಯನ್ನು ಹಾಳು ಮಾಡಿದ್ದಾರೆ. ಆ ಸೇವೆಯ ಸಹಾಯವಾಣಿ ಸಂಖ್ಯೆ ಕೆಲಸವೇ ಮಾಡುತ್ತಿಲ್ಲ. ಲ್ಯಾಪ್‌ಟಾಪ್‌ ವಿತರಿಸುವುದಾಗಿ ಬಿಜೆಪಿ ಭರವಸೆ ಕೊಟ್ಟಿತ್ತು. ಆದರೆ, ಬಾಬಾಗೆ ಲ್ಯಾಪ್‌ಟಾಪ್‌ ಬಳಸುವುದು ಗೊತ್ತಿಲ್ಲ. ಹಾಗಾಗಿ ಅವರು ಲ್ಯಾಪ್‌ಟಾಪ್‌ ವಿತರಣೆ ಕೈಬಿಟ್ಟಿದ್ದಾರೆ’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು