ಭಾನುವಾರ, ಆಗಸ್ಟ್ 18, 2019
25 °C
ಬಾಬರಿ ಮಸೀದಿ ಧ್ವಂಸದ ಒಳಸಂಚು ಪ್ರಕರಣ

ಬಾಬರಿ ಮಸೀದಿ ಧ್ವಂಸ: 9 ತಿಂಗಳಲ್ಲಿ ತೀರ್ಪಿಗೆ ಸೂಚನೆ

Published:
Updated:

ನವದೆಹಲಿ: ‘ಬಾಬರಿ ಮಸೀದಿ ಧ್ವಂಸದ ಒಳಸಂಚು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಪೂರ್ತಿಗೊಳಿಸಿ, 9 ತಿಂಗಳೊಳಗೆ ತೀರ್ಪು ನೀಡಬೇಕು’ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ.

‘ಈ ಪ್ರಕರಣದ ವಿಚಾರಣೆ ಮುಗಿಸಲು ಇನ್ನೂ ಆರು ತಿಂಗಳ ಕಾಲಾವಕಾಶ ನೀಡಬೇಕು’ ಎಂದು ವಿಶೇಷ ನ್ಯಾಯಾಧೀಶರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಅದನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಬಿಜೆಪಿ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾಭಾರತಿ, ವಿನಯ್‌ ಕಟಿಯಾರ್‌ ಹಾಗೂ ಸಾಧ್ವಿ ರಿತಂಬರಾ ಅವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.

Post Comments (+)