ಶುಕ್ರವಾರ, ಸೆಪ್ಟೆಂಬರ್ 20, 2019
25 °C

‘ಹೆಣ್ಣು ಭ್ರೂಣಹತ್ಯೆ ಸಮಾಜದ್ರೋಹಿ ಕೃತ್ಯ’

Published:
Updated:

ನವದೆಹಲಿ: ‘ಹೆಣ್ಣು ಭ್ರೂಣಹತ್ಯೆ ಮಾಡುವುದಕ್ಕಿಂತ ಕೆಟ್ಟ ಕೆಲಸ, ಅನೈತಿಕ ಮತ್ತು ಸಮಾಜ ದ್ರೋಹಿ ಕೃತ್ಯ ಬೇರೊಂದಿಲ್ಲ’ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

ಗರ್ಭಧಾರಣೆ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಸರಳಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ ಮತ್ತು ವಿನೀತ್‌ ಸರನ್‌ ಒಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಡಯಗ್ನೊಸ್ಟಿಕ್‌ ಕೇಂದ್ರಗಳಲ್ಲಿ ಒದಗಿಸುವ ಸೇವೆಗಳ ಬಗ್ಗೆ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಹೆಣ್ಣು ಭ್ರೂಣಹತ್ಯೆ ಮಾಡುವ ನಿಟ್ಟಿನಲ್ಲಿನ ಮೊದಲ ಹೆಜ್ಜೆ’ ಎಂದೂ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

 

Post Comments (+)