ಭಾನುವಾರ, ಆಗಸ್ಟ್ 18, 2019
26 °C

ದೇಶದೆಲ್ಲೆಡೆ ಈದ್ ಸಂಭ್ರಮ: ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ

Published:
Updated:

ನವದೆಹಲಿ: ದೇಶದಾದ್ಯಂತ ಇಂದು ಈದ್ ಉಲ್ ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇಶದ ಹಲವೆಡೆ ಮುಸ್ಲಿಮರು ಮುಂಜಾನೆಯೇ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಮುಂಬೈನ ಹಮೀದಿಯಾ ಮಸೀದಿಯಲ್ಲಿ ಬೆಳ್ಳಂಬೆಳಿಗ್ಗೆಯೇ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ದೆಹಲಿಯ ಜಾಮಾ ಮಸೀದಿ, ಮಧ್ಯ ಪ್ರದೇಶದ ಈದ್ಗಾ ಮಸೀದಿಯಲ್ಲೂ ನೂರಾರು ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂದಿದೆ.

ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಅನೇಕ ಗಣ್ಯರು ಜನತೆಗೆ ಈದ್ ಉಲ್ ಫಿತರ್ ಶುಭಾಶಯ ಕೋರಿದ್ದಾರೆ.

370ನೇ ವಿಧಿ ರದ್ದತಿಯಿಂದ ಪ್ರಕ್ಷುಬ್ಧಗೊಂಡಿರುವ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಬಂಧ ಸಡಿಲಿಸುವ ಮೂಲಕ ಬಕ್ರೀದ್ ವಿಶೇಷ ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.


ಮಧ್ಯ ಪ್ರದೇಶದ ಈದ್ಗಾ ಮಸೀದಿಯಲ್ಲಿ ಬಾಲಕರಿಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು – ಎಎನ್‌ಐ ಚಿತ್ರ

 

Post Comments (+)