ಬಾಳಾ ಠಾಕ್ರೆ ಉಯಿಲು: ಮೊಕದ್ದಮೆ ವಾಪಸ್‌ ಪಡೆದ ಪುತ್ರ

7

ಬಾಳಾ ಠಾಕ್ರೆ ಉಯಿಲು: ಮೊಕದ್ದಮೆ ವಾಪಸ್‌ ಪಡೆದ ಪುತ್ರ

Published:
Updated:

ಮುಂಬೈ: ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರು ಬರೆದಿಟ್ಟಿದ್ದ ಉಯಿಲು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಹೂಡಿದ್ದ ಮೊಕದ್ದಮೆಯನ್ನು ಪುತ್ರ ಜೈದೇವ್‌ ಠಾಕ್ರೆ ಶುಕ್ರವಾರ ಹಿಂತೆಗೆದುಕೊಂಡಿದ್ದಾರೆ.

ಇನ್ನೊಬ್ಬ ಪುತ್ರ ಉದ್ಧವ್‌ ಠಾಕ್ರೆ ಅವರಿಂದ ಪ್ರಭಾವಕ್ಕೊಳಗಾಗಿ ಮನಸ್ಸಿಲ್ಲದ ಮನಸ್ಸಿನಿಂದ ಬಾಳಾ ಠಾಕ್ರೆ ಅವರು ಉಯಿಲು ಬರೆದಿದ್ದರು ಎಂದು ಜಯದೇವ್‌ ಆರೋಪಿಸಿದ್ದರು.

ಮೊಕದ್ದಮೆ ಹಿಂತೆಗೆದುಕೊಳ್ಳುವ ಕಾರಣವನ್ನು ಅವರು ತಿಳಿಸಿಲ್ಲ.

ತಮ್ಮ ಬಹುಪಾಲು ಆಸ್ತಿಯನ್ನು ಪುತ್ರ ಹಾಗೂ ಈಗಿನ ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆಗೆ ನೀಡುವುದಾಗಿ ಬಾಳಾ ಠಾಕ್ರೆ  ಉಯಿಲಿನಲ್ಲಿ ಬರೆದಿದ್ದರು. ಅಲ್ಲದೆ ತಮ್ಮ ಮನೆ ಮಾತೋಶ್ರೀಯ ಮೊದಲ ಮಹಡಿಯನ್ನು ಜೈದೇವ್‌ ಅವರ ವಿಚ್ಛೇದಿತ ಪತ್ನಿ ಸ್ಮಿತಾ ಹಾಗೂ ಪುತ್ರ ಐಶ್ವರ್ಯ ಅವರ ಹೆಸರಿಗೂ ಬರೆದಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !