ಭಾನುವಾರ, ಮೇ 9, 2021
24 °C

ದಾಳಿ ಚುನಾವಣಾ ವಿಷಯವಲ್ಲ: ಸಚಿವ ಹರ್ಷವರ್ಧನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಬಾಲಾಕೋಟ್‌ ವಾಯು ದಾಳಿ ರಾಜಕೀಯ ವಿಷಯವಲ್ಲ, ಮತ ಗಳಿಕೆಗಾಗಿ ಇದನ್ನು ಬಳಸುವ ಬಗ್ಗೆ ಯೋಚನೆಯನ್ನೂ ಮಾಡುವಂತಿಲ್ಲ’ ಎಂದು ಕೇಂದ್ರದ ಸಚಿವ ಹರ್ಷವರ್ಧನ್‌ ಹೇಳಿದ್ದಾರೆ.

ಮತಗಳಿಕೆಗಾಗಿ ಬಾಲಾಕೋಟ್‌ ದಾಳಿಯ ವಿಚಾರವನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.

‘ಸೇನೆಯ ಇಂಥ ಸಾಹಸಗಳು ನಮ್ಮೆಲ್ಲರಲ್ಲೂ ರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುತ್ತವೆ. ಮೋದಿ ಅವರ ಸಮಗ್ರ ರಾಷ್ಟ್ರೀಯತೆಯ ದೃಷ್ಟಿಕೋನವನ್ನು ಇವು ಪ್ರತಿನಿಧಿಸುತ್ತವೆ. ಆದ್ದರಿಂದ ಅವುಗಳನ್ನು ಉಲ್ಲೇಖಿಸಲಾಗುತ್ತದೆಯೇ ವಿನಾ ರಾಜಕೀಯ ಲಾಭಕ್ಕಲ್ಲ. ಮತಗಳಿಕೆಗಾಗಿ ಬಾಲಾಕೋಟ್‌ ದಾಳಿಯ ಘಟನೆಯನ್ನು ಬಳಸಿಕೊಳ್ಳಲಾಗುತ್ತದೆ ಎಂಬುದು ನಿಮ್ಮ ದೃಷ್ಟಿಕೋನ’ ಎಂದರು.

‘ನಾನು ಆ ವಿಚಾರ ಪ್ರಸ್ತಾಪಿಸುವುದಿಲ್ಲ. ಜನರ ಮುಂದೆ ಹೇಳಿಕೊಳ್ಳಲು ನನಗೆ ನನ್ನ ಕ್ಷೇತ್ರದಲ್ಲಿ ಮಾಡಿರುವ ನೂರಾರು ಅಭಿವೃದ್ಧಿ ಕಾರ್ಯಗಳಿವೆ’ ಎಂದರು.

ಇದನ್ನೂ ಓದಿ... 

‘ಆಮ್ ಆದ್ಮಿ ಪಕ್ಷವು ಭ್ರಷ್ಟಾಚಾರದ ನಿಜವಾದ ಮಿತ್ರ’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು