ಶನಿವಾರ, ಅಕ್ಟೋಬರ್ 19, 2019
27 °C

ಪಾಕ್‌ ಧ್ವಜದ ಚಿತ್ರವುಳ್ಳ ಬಲೂನು ಪತ್ತೆ

Published:
Updated:

ಬಿಕಾನೇರ್: ಪಾಕಿಸ್ತಾನದ ಧ್ವಜದ ಚಿತ್ರ ಹಾಗೂ ‘ಆ.14 ಮುಬಾರಕ್’ ಎನ್ನುವ ಬರಹವುಳ್ಳ ಬಲೂನು ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

‘ರಾಯ್‌ಸಿಂಗ್ ನಗರದಲ್ಲಿ ವ್ಯಕ್ತಿಯೊಬ್ಬರು ಈ ಬಲೂನು ನೋಡಿ ಮಾಹಿತಿ ನೀಡಿದರು. ಕಳೆದ ಕೆಲವು ದಿನಗಳಲ್ಲಿ ಅಂದಾಜು ಡಜನ್‌ನಷ್ಟು ಇಂತಹ ಬಲೂನುಗಳು ಕಂಡುಬಂದಿವೆ. ಗುಪ್ತಚರ ಸಂಸ್ಥೆಗೆ ಈ ಕುರಿತು ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಪಾಕಿಸ್ತಾನದ ಜತೆಗೆ ಗಡಿ ಹೊಂದಿರುವ ರಾಜಸ್ಥಾನದ ನಾಲ್ಕು ಜಿಲ್ಲೆಗಳಲ್ಲಿ ಗಂಗಾನಗರ ಸಹ ಸೇರಿದೆ.

Post Comments (+)