ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಗೆ 72 ವರ್ಷಗಳ ಕಾಲ ನಿರ್ಬಂಧ ವಿಧಿಸಿ: ಅಖಿಲೇಶ್ ಯಾದವ್

Last Updated 30 ಏಪ್ರಿಲ್ 2019, 8:36 IST
ಅಕ್ಷರ ಗಾತ್ರ

ಲಖನೌ:ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಟಿಎಂಸಿ ಶಾಸಕರು ಬಿಜೆಪಿಗೆ ಸೇರುತ್ತಾರೆ. ಈಗಾಗಲೇ ಟಿಎಂಸಿಯ ಶಾಸಕರ40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಮೋದಿಯವರ ಈ ಹೇಳಿಕೆಗೆ ಆಕ್ಷೇಪ ವ್ಯಕ್ತ ಪಡಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಈ ರೀತಿ ಭಾಷಣ ಮಾಡಿದ್ದಕ್ಕೆ ಮೋದಿಗೆ 72 ವರ್ಷಗಳ ಕಾಲ ನಿರ್ಬಂಧ ವಿಧಿಸಬೇಕು ಎಂದಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಸೇರಿದಂತೆ ಹಲವಾರು ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆಚುನಾವಣಾ ಆಯೋಗವುನಿರ್ಬಂಧ ವಿಧಿಸಿತ್ತು.

ಮೋದಿ ವಿರುದ್ಧ ಟ್ವೀಟ್ ಕಿಡಿ ಕಾರಿರುವ ಅಖಿಲೇಶ್, ವಿಕಾಸ್ (ಅಭಿವೃದ್ಧಿ) ಕೇಳುತ್ತಿದೆ. ನೀವು ಪ್ರಧಾನಿಯವರ ಅವಮಾನಕರವಾದ ಭಾಷಣನ್ನು ಕೇಳಿದ್ದೀರಾ?. 125 ಕೋಟಿ ಭಾರತೀಯರ ನಂಬಿಕೆಯನ್ನು ಕಳೆದುಕೊಂಡ ನಂತರ ಮೋದಿ ಈಗ 40 ಶಾಸಕರು ಪಕ್ಷಾಂತರ ಮಾಡುತ್ತಿದ್ದಾರೆ ಎಂಬ ಭ್ರಮೆಯಲ್ಲಿದ್ದಾರೆ ಎಂದಿದ್ದಾರೆ.

ಇದು ಮೋದಿಯವರ ಕಪ್ಪು ಹಣ ಮನಸ್ಥಿತಿಯನ್ನು ತೋರಿಸುತ್ತದೆ.ಅವರಿಗೆ 72 ಗಂಟೆಗಳ ಕಾಲ ಅಲ್ಲ 72 ವರ್ಷಗಳ ಕಾಲ ನಿರ್ಬಂಧ ವಿಧಿಸಿ ಎಂದಿದ್ದಾರೆ ಅಖಿಲೇಶ್.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT