ದೆಹಲಿ: ಬ್ಯಾಂಕ್‌ ಕ್ಯಾಷಿಯರ್ ಹತ್ಯೆಗೈದು ₹3 ಲಕ್ಷ ದರೋಡೆ ಮಾಡಿದ ದುಷ್ಕರ್ಮಿಗಳು

7

ದೆಹಲಿ: ಬ್ಯಾಂಕ್‌ ಕ್ಯಾಷಿಯರ್ ಹತ್ಯೆಗೈದು ₹3 ಲಕ್ಷ ದರೋಡೆ ಮಾಡಿದ ದುಷ್ಕರ್ಮಿಗಳು

Published:
Updated:

ನವದೆಹಲಿ: ಕಾರ್ಪೋರೇಷನ್‌ ಬ್ಯಾಂಕ್‌ಗೆ ನುಗ್ಗಿದ ಆರು ಮಂದಿ ದುಷ್ಕರ್ಮಿಗಳ ತಂಡ ಕ್ಯಾಷಿಯರ್‌ನನ್ನು ಹತ್ಯೆ ಮಾಡಿ ₹3 ಲಕ್ಷ ಕದ್ದೊಯ್ದ ಘಟನೆ ರಾಷ್ಟ್ರ ರಾಜಧಾನಿಯ ಚಾವ್ಲಾ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಮುಖಕ್ಕೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಏಕಾಏಕಿ ಬ್ಯಾಂಕಿಗೆ ನುಗ್ಗಿದ್ದು, ಮಾರಕಾಸ್ತ್ರಗಳಿಂದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ಬಂದೂಕನ್ನು ಕಿತ್ತುಕೊಂಡಿದ್ದಾರೆ. ಹಣವನ್ನು ದೊಚಿ ಪರಾರಿಯಾಗುವ ಸಂದರ್ಭದಲ್ಲಿ ಕ್ಯಾಷಿಯರ್‌ ಸಂತೋಷ್‌ ಮೇಲೆ ಗುಂಡು ಹಾರಿಸಿದ್ದಾರೆ.

ಘಟನೆಯ ದೃಶ್ಯಾವಳಿಗಳು ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಅದನ್ನು ಆಧರಿಸಿ ದುಷ್ಕರ್ಮಿಗಳನ್ನು ಈಗಾಗಲೇ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರು ಮಂದಿ ಬ್ಯಾಂಕ್‌ ಸಿಬ್ಬಂದಿ ಹಾಗೂ ಹತ್ತು ಮಂದಿ ಗ್ರಾಹಕರನ್ನು ದುಷ್ಕರ್ಮಿಗಳು ಕೂಡಿ ಹಾಕಿದ್ದಾರೆ. ನಂತರ ಹಣ ಲೂಟಿ ಮಾಡಿ ಪರಾರಿಯಾಗುತ್ತಿದ್ದ ವೇಳೆ ಪ್ರತಿರೋಧ ಒಡ್ಡಿದ ಕ್ಯಾಷಿಯರ್‌ ಸಂತೋಷ್ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಕೂಡಲೇ ಸಂತೋಷ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಷ್ಟರಲ್ಲಿ ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !