ಮೊಬೈಲ್‌ ಆಧಾರ್ ಕಡ್ಡಾಯಕ್ಕೆ ಅವಕಾಶ: ಸಚಿವ ಅರುಣ್ ಜೇಟ್ಲಿ

6

ಮೊಬೈಲ್‌ ಆಧಾರ್ ಕಡ್ಡಾಯಕ್ಕೆ ಅವಕಾಶ: ಸಚಿವ ಅರುಣ್ ಜೇಟ್ಲಿ

Published:
Updated:

ನವದೆಹಲಿ: ಸಂಸತ್ತಿನ ಅನುಮೋದನೆ ಪಡೆದ ಕಾನೂನನ್ನು ಜಾರಿಗೆ ತರುವ ಮೂಲಕ ಬ್ಯಾಂಕ್ ಖಾತೆಗಳಿಗೆ ಮತ್ತು ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಜೋಡಿಸುವುದನ್ನು ಕಡ್ಡಾಯಗೊಳಿಸಲು ಈಗಲೂ ಅವಕಾಶವಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹಿಂದುಸ್ತಾನ್ ಟೈಮ್ಸ್‌ ನಾಯಕತ್ವ ಶೃಂಗಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಭಾರತದಂತಹ ದೇಶದಲ್ಲಿ ಸರ್ಕಾರವು ಜನರಿಗೆ ಅನೇಕ ಸವಲತ್ತುಗಳನ್ನು ನೀಡುತ್ತದೆ. ಅವುಗಳ ಸದ್ವಿನಿಯೋಗಕ್ಕೆ ಆಧಾರ್‌ನಂತಹ ವ್ಯವಸ್ಥೆ ಬೇಕು. ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಬೇಕು ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಆಧಾರ್‌ನ ಉದ್ದೇಶವೂ ಅದೇ ಆಗಿತ್ತು’ ಎಂದು ಅವರು ಹೇಳಿದ್ದಾರೆ.

ಬ್ಯಾಂಕ್‌ ಖಾತೆಗಳಿಗೆ ಮತ್ತು ಮೊಬೈಲ್‌ ಸಂಖ್ಯೆಗಳಿಗೆ ಆಧಾರ್ ಜೋಡಿಸುವುದರಿಂದ ದೇಶಕ್ಕೆ ಅನುಕೂಲವಿದೆ ಎಂಬುದನ್ನು ಸಾಬೀತು ಮಾಡಿದರೆ, ಮತ್ತೆ ಅದನ್ನು ಅನುಷ್ಠಾನಕ್ಕೆ ತರಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ. ಆದರೆ ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗುತ್ತದೆಯೇ ಎಂಬುದರ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

ಲೈಂಗಿಕ ಚಟುವಟಿಕೆಗಳನ್ನು ಹೇಗೆ ತಡೆಯುತ್ತೀರಿ: ವ್ಯಭಿಚಾರ ತಪ್ಪಲ್ಲ ಎಂಬಂತಹ ತೀರ್ಪು ಪ್ರಕಟವಾಗಿದೆ. ಅದು ಸ್ವಾಗತಾರ್ಹ. ಆದರೆ ಲೈಂಗಿಕತೆಯು ಮೂಲಭೂತ ಹಕ್ಕು ಎಂದು ಅರ್ಥೈಸಲಾಗಿದೆ. ವ್ಯಭಿಚಾರ ತಪ್ಪಲ್ಲ ಅಂದಮೇಲೆ ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಲಯಗಳಲ್ಲಿ, ಜೈಲುಗಳಲ್ಲಿ ನಡೆಯಬಹುದಾದ ಯಾವುದೇ ಸ್ವರೂಪದ ಲೈಂಗಿಕ ಚಟುವಟಿಕೆಗಳನ್ನು ಹೇಗೆ ತಡೆಯುತ್ತೀರಿ ಎಂದು ಅರುಣ್ ಜೇಟ್ಲಿ ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !